ಹಿರೇಮ್ಯಾಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಐಇಸಿ ಸಂಯೋಜಕ ಶರಣಪ್ಪ ಹಾಲಕೇರಿ ಮಾತನಾಡಿದರು. ಪಿಡಿಒ ಬಸವರಾಜ ಕಿಳ್ಳಿಕ್ಯಾತರ, ಡಿಇಒ ರಮೇಶ ಇತರರಿದ್ದರು. 
ಜಿಲ್ಲೆ

ಪುರುಷ-ಮಹಿಳೆಯರಿಗೆ ಸಮಾನ ವೇತನ

ಯಲಬುರ್ಗಾ: ತಾಯಿ ತನ್ನ ಮಕ್ಕಳಿಗಾಗಿ ತನ್ನೆಲ್ಲಾ ಜೀವನವನ್ನೇ ಮುಡಿಪಾಗಿಡುತ್ತಾಳೆ ಎಂದು ತಾಲೂಕು ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಹೇಳಿದರು. ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ತಾಯಂದಿರ ದಿನ, ಸ್ತ್ರೀ ಚೇತನ ಅಭಿಯಾನ, ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಮಹಿಳಾ ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದುಡಿಯೋಣ ಬಾ ಅಭಿಯಾನದಡಿ ಮೂರು ತಿಂಗಳ ಕೆಲಸ ನೀಡುತ್ತಿದ್ದು, ಇಲ್ಲಿ ಪುರುಷ-ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುವುದು ಎಂದರು.