ಗುಳೇದಗುಡ್ಡ ಬಾಲಕರ ಪಪೂ ಕಾಲೇಜಿನ ಅಂಗವಿಕಲ ಮಕ್ಕಳ ಕ್ಷೇತ್ರ ಭೇಟಿ ಪ್ರವಾಸಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಚಾಲನೆ ನೀಡಿದರು. ಎಂ.ಸಿ. ಮುದಕವಿ, ರಾಮಚಂದ್ರ ಬಾಪಟ, ರಾಜಶೇಖರ ಹುನಗುಂದ, ಜಗದೀಶ ಬುಳ್ಳಾ, ಭಾಗಿರಥಿ ಆಲೂರ ಮತ್ತಿತರರಿದ್ದಾರೆ. 
ಜಿಲ್ಲೆ

ಅಂಗವಿಕಲ ಮಕ್ಕಳಿಗೆ ಸಮಾನ ಅವಕಾಶ ಅವಶ್ಯ

ಗುಳೇದಗುಡ್ಡ: ಸಾಮಾನ್ಯ ಮಕ್ಕಳಂತೆ ವಿಕಲಚೇತನ ಮಕ್ಕಳಿಗೂ ಸಮಾನ ಅವಕಾಶ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಹೇಳಿದರು.

ನಗರದ ಬಾಲಕರ ಪಪೂ ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅಂಗವಿಕಲ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಮೂಡಿಸುವ ಕ್ಷೇತ್ರ ಭೇಟಿ ಪ್ರವಾಸದ ಅಂಗವಾಗಿ ಶುಕ್ರವಾರ ಗದಗ ಜಿಲ್ಲಾ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶೇಷಚೇತನ ಮಕ್ಕಳಿಗೆ ಪ್ರವಾಸ ಸಂದರ್ಭದಲ್ಲಿ ಆಹಾರ ಮತ್ತಿತರ ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಸುರಕ್ಷಿತವಾಗಿ ಪ್ರವಾಸ ಕೈಗೊಳ್ಳಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.

ಮುಖ್ಯಶಿಕ್ಷಕ ಎಂ.ಸಿ. ಮುದಕವಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಾಮಚಂದ್ರ ಬಾಪಟ, ರಾಜಶೇಖರ ಹುನಗುಂದ, ಜಗದೀಶ ಬುಳ್ಳಾ, ಭಾಗಿರಥಿ ಆಲೂರ, ಎಸ್.ಎಚ್.ಮೂಲಿಮನಿ, ಸಂಪನ್ಮೂಲ ಶಿಕ್ಷಕರಾದ ಎಸ್.ಎಸ್. ಚೌಕದ, ವಿ.ಎಚ್. ಮಡಿವಾಳರ ಮತ್ತಿತರರಿದ್ದರು.