ಜಿಲ್ಲೆ

ಭವಿಷ್ಯನಿಧಿ ಪ್ರಯೋಜನ ಪಡೆಯಿರಿ: ಡಾ. ಪ್ರಕಾಶ ಸಂಕನೂರ

ಗದಗ:
ಭವಿಷ್ಯನಿಧಿಯು ಕಷ್ಟ ಕಾಲದಲ್ಲಿ ಉಪಯೋಗ ಬರುವುದರ ಜತೆಗೆ ನಿವೃತ್ತಿ ಕಾಲದಲ್ಲಿ ಅದರ ಪ್ರಯೋಜನವು ಸಿಗುತ್ತದೆ ಎಂದು ಡಾ. ಪ್ರಕಾಶ ಸಂಕನೂರ ಅವರು ಹೇಳಿದರು.
ನಗರದ ಸಂಕನೂರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ "ಭವಿಷ್ಯನಿಧಿ ನಿಮ್ಮ ಬಾಗಿಲಿಗೆ' ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಧ್ಯಮ ವರ್ಗದ ಜನರಿಗೆ ಭವಿಷ್ಯ ನಿಧಿ ನಾನಾ ಸೌಲಬ್ಯಗಳನ್ನು ದೊರಕಿಸಿ ಕೊಡುತ್ತದೆ. ಅದರಲ್ಲಿ ಆರೋಗ್ಯ ಸೌಲಭ್ಯವು ಒಂದಾಗಿದೆ. ಕಾಮಿರ್ಕರು ತಪ್ಪದೇ ಭವಿಷ್ಯ ನಿಧಿ ಮಾಡಿಸಬೇಕು ಎಂದರು
ಕಾಮಿರ್ಕ ಇಲಾಖೆ ಅಧಿಕಾರಿ ವೀರಣ್ಣ ಕುಬಸದ ಅವರು, ಭವಿಷ್ಯನಿಧಿಯ ಸೌಲಭ್ಯ, ಸವಲತ್ತು ಕುರಿತು ಮಾತನಾಡಿದರು. ಯಾವುದೇ ಕಂಪನಿ ಅಥವಾ ಇನ್ನಿತರ ೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾಮಿರ್ಕರು ಕನಿಷ್ಠ 10 ಜನ ಇದ್ದರೂ ಭವಿಷ್ಯನಿಧಿಗೆ ಅರ್ಹರು ಎಂದು ಹೇಳಿದರು.
ರಶ್ಮಿ ವಿನ್ಸೆಂಟ್​, ಶ್ವೇತಾ ಸಂಕನೂರ, ವಿನ್ಸೆಂಟ್​ ಪಾಟೀಲ ಹಾಗೂ ಸಂಕನೂರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಉಪಸ್ಥಿತರಿದ್ದರು.