ನೆಲವಾಗಿಲು ಗ್ರಾಪಂಗೆ ಗುರುವಾರ ಭೇಟಿ ನೀಡಿ ತಾಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಕಡತ ಪರಿಶೀಲನೆ ನಡೆಸಿದರು. ತಾಪಂ ಸಹಾಯಕ ನಿರ್ದೇಶಕ ಮೆಹಬೂಬ್ ಪಾಷಾ, ತಾಂತ್ರಿಕ ಅಭಿಯಂತ ಚೌಡಾರೆಡ್ಡಿ, ಪಿಡಿಒ ಕಾಂತರಾಜು, ಗ್ರಾಪಂ ಅಧ್ಯಕ್ಷೆ ವಸಂತಾ ಲೋಕೇಶ್, ಉಪಾಧ್ಯಕ್ಷ ರವಿ ಇದ್ದರು. 
ಜಿಲ್ಲೆ

ಸ್ವಚ್ಛತೆ ಕಾಪಾಡಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನಂದಗುಡಿ
ಪರಿಸರ ಸ್ವಚ್ಛತೆ ಕಾಪಾಡಿ, ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬೇಕು. ನೀರು ಶೇಖರಣೆಯಾಗದಂತೆ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಹೊಸಕೋಟೆ ತಾಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಹೇಳಿದರು.
ಹೊಸಕೋಟೆ ತಾಲೂಕು ನೆಲವಾಗಿಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದ ಬಳಿಕ ನರೇಗಾ ಕಾಮಗಾರಿ ಸ್ಥಳ ವೀಕ್ಷಿಸಿ ಮಾತನಾಡಿದರು. ಮನೆಗಳಲ್ಲಿರುವ ಡ್ರಮ್‌ಗಳಲ್ಲಿ ಹೆಚ್ಚು ದಿನ ಶುದ್ಧ ನೀರನ್ನು ಶೇಖರಣೆ ಮಾಡುವುದರಿಂದ ಲಾವಾ ಮರಿಗಳು ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತದೆ. ಹೆಚ್ಚು ದಿನಗಳ ಕಾಲ ನೀರನ್ನು ತೊಟ್ಟಿಗಳಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಬಾರದು ಎಂದು ಸಲಹೆ ನೀಡಿದರು.
ಚರಂಡಿಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಿ, ಸೊಳ್ಳೆಗಳ ಹಾವಳಿಗೆ ಕಡಿವಾಣ ಹಾಕಬೇಕು. ಗ್ರಾಮಸ್ಥರಿಗೆ ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸಿ, ತಮ್ಮ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಧಿಕಾರಿಗಳು ಗ್ರಾಮಗಳಲ್ಲಿ ತೆಂಗಿನ ಚಿಪ್ಪು, ಖಾಲಿ ಟಯರು, ಖಾಲಿ ಡ್ರಮ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅಭಿವೃದ್ಧಿ ಕಾಮಗಾರಿಗಳ ಕಡತಗಳ ಪರಿಶೀಲನೆ ನಡೆಸಿ, ನರೇಗಾ ಕಾಮಗಾರಿ ವೀಕ್ಷಣೆ, ಕೂಸಿನ ಮನೆಗೆ ಭೇಟಿ ನೀಡಿ, ಮಕ್ಕಳ ಪಾಲನೆ, ಶುಚಿತ್ವ ಹಾಗೂ ಪೌಷ್ಟಿಕ ಆಹಾರ ಪರಿಶೀಲನೆ, ಮಕ್ಕಳ ಹಾಜರಾತಿ ಹೆಚ್ಚಿಸುವ ಬಗ್ಗೆ ಮಾಹಿತಿ ಪಡೆದರು.