ಸಿಂಧನೂರು ತಾಪಂ ಇಒ ಬಗ್ಗೆ ಹಲವು ಆರೋಪ ಹಾಗೂ ಅಸಮಾಧಾನಗಳನ್ನು ಹೊರಹಾಕಿದ ಪಿಡಿಒ ಕ್ಷೇಮಾಭಿವೃದ್ಧಿ ಸಂಘ(ರಿ) ತಾಲೂಕು ಸಮಿತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ಪಿಡಿಒಗಳಾದ ಲಿಂಗಪ್ಪ, ಪಂಪನಗೌಡ, ಬಸವರಾಜ, ಸಿದ್ದಪ್ಪ, ಮಲ್ಲೇಶ, ಮೋಹಿನ್, ಆಶಾ, ಸಿದ್ದಮ್ಮ ಇತರರಿದ್ದರು. 
ಜಿಲ್ಲೆ

ಇಒ ಅಧಿಕಾರಶಾಹಿ ವರ್ತನೆ ನಿಲ್ಲಿಸಲಿ

ಗಾಯತ್ರಿ ಮಾಲಿಪಾಟೀಲ್

ಸಿಂಧನೂರು: ತಾಪಂ ಇಒ ಬಗ್ಗೆ ಹಲವು ಆರೋಪ ಹಾಗೂ ಅಸಮಾಧಾನ ಹೊರಹಾಕಿದ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ತಾಲೂಕು ಸಮಿತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಇತ್ತೀಚೆಗೆ ತಾಪಂ ಇಒ ಆಡಳಿತ ವೈಖರಿ ಹಾಗೂ ವರ್ತನೆಯಿಂದ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾನಸಿಕವಾಗಿ ನೊಂದಿದ್ದಾರೆ. ಅವರ ಅಧಿಕಾರಶಾಹಿ ಮನೋಭಾವನೆ, ಸರ್ವಾಧಿಕಾರಿ ಧೋರಣೆ, ಏಕಪಕ್ಷೀಯ ನಿರ್ಧಾರ, ವಿನಾಕಾರಣ ನೌಕರರ ಮೇಲೆ ಸಿಟ್ಟಿನಿಂದ ಪಿಡಿಒಗಳು ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಮಾನಸಿಕ ನೋವು ಅನುಭವಿಸುತ್ತಿದ್ದಾರೆ. ಹಾಗಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಈ ಸಮಸ್ಯೆ ಕುರಿತು ಮಾತನಾಡಿ ಪರಿಹರಿಸುವಂತೆ ಒತ್ತಾಯಿಸಿದರು. ಮನವಿಪತ್ರವನ್ನು ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಬಸನಗೌಡ ಬಾದರ್ಲಿ, ಜಿಪಂ ಸಿಇಒ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧ್ಯಕ್ಷ ಕೃಷ್ಣರಿ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.