ಜಿಲ್ಲೆ

ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಿ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ಅಂಗವಿಕಲರ ಸಬಲೀಕರಣಕ್ಕಾಗಿ ರೂಪಿಸಿರುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಆರ್‌ಡಿಪಿಆರ್ ಮತ್ತು ಆರ್‌ಜಿಪಿಆರ್ ೆಲೋಶಿಪ್ ಕಾರ್ಯಕ್ರಮದಡಿ ಆರ್‌ಡಬ್ಲುೃ, ವಿಆರ್‌ಡಬ್ಲುೃ,ಯುಆರ್‌ಡಬ್ಲುೃಗಳಿಗೆ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವಿಆರ್‌ಡಬ್ಲುೃಗಳು ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದ್ದು, ಯೋಜನೆಗಳನ್ನು ಆನ್‌ಲೈನ್ ಮೂಲಕ ಸಾಕಾರಗೊಳಿಸಲು ಅನುಕೂಲವಾಗಲಿದೆ. ಅಂಗವಿಕಲರ ಸ್ವಸಹಾಯ ಸಂಘಗಳನ್ನು ರಚಿಸಲು ಉತ್ತೇಜನ ನೀಡಬೇಕಿದ್ದು, ಸ್ವ ಉದ್ಯೋಗದ ಮೂಲಕ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕು. ನರೇಗಾ ಯೋಜನೆಯಡಿ ಅಂಗವಿಕಲರಿಗೆ ಪ್ರತ್ಯೇಕ ಉದ್ಯೋಗ ಚೀಟಿ ಪಡೆಯಲು ಅವಕಾಶವಿದೆ ಎಂದರು.

ಕಾರ್ಯಾಗಾರದಲ್ಲಿ ಅಂಗವಿಕಲರ ಶೇ.5ರ ಅನುದಾನ ಮತ್ತು 15ನೇ ಹಣಕಾಸಿನ ಸೌಲಭ್ಯ, ಗ್ರಂಥಪಾಲಕರಿಗೆ ಅಂತರ್ಜಾಲ ಮತ್ತು ಗಣಕಯಂತ್ರ ಉಪಯೋಗದ ಕುರಿತು ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಸುಮಿತ್ರಾ ಮೆಣಸಿನಕಾಯಿ ತರಬೇತಿ ನೀಡಿದರು.

ವಿಷಯ ನಿರ್ವಾಹಕಿ ಸುಮಂಗಲಾ, ಎಂಆರ್‌ಡಬ್ಲುೃ ಮಂಜುಳಾ ಪುರಾಣಿಕಮಠ, ವಿಆರ್ ಡಬ್ಲುೃಗಳಾದ ಮಂಜುನಾಥ ಹೊಸಕೇರಾ, ಬಸವರಾಜ್ ಗೋನಾಳ, ಶೈಲಶ್ರೀ, ವೀರಮ್ಮ, ಪಾಂಡುರಂಗ, ಯಮನೂರಪ್ಪ ಇತರರಿದ್ದರು.