ಕಾರವಾರ: ಜಿಲ್ಲೆಯಲ್ಲಿನ ಪರಿಸರ ಸೂಕ್ಷ್ಮ ವಲಯಗಳಲ್ಲಿ (Environmentally sensitive zone) ಯಾವುದೇ ಕಾಮಗಾರಿ ಅಥವಾ ಚಟುವಟಿಕೆಗಳನ್ನು ಕೈಗೊಳ್ಳಲು ಕಂದಾಯ ಇಲಾಖೆಯಿಂದ ಅನುಮತಿ ನೀಡುವ ಮುನ್ನ ಸಂಬಂದಪಟ್ಟ ವ್ಯಾಪ್ತಿಯ ಡಿಎಫ್‌ಒಗಳ ಲಿಖಿತ ಅಭಿಪ್ರಾಯ ಪಡೆಯುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ, ಶರಾವತಿ ಕಣಿವೆ ಸಿಂಗಳಿಕ ಸಂರಕ್ಷಿ ಅಭಯಾರಣ್ಯ, ಅತ್ತಿವೇರಿ ಪಕ್ಷಿಧಾಮ ಪ್ರದೇಶಗಳು ಪರಿಸರ ಸೂಕ್ಷ್ಮ ವಲಯಗಳು ಎಂದು ಗುರುತಿಸಲ್ಪಟ್ಟಿವೆ.
ಪ್ರದೇಶಗಳಲ್ಲಿ ಕಡ್ಡಾಯವಾಗಿ ನಿರ್ಭಂದಿಸಿರುವ ಕಾಮಗಾರಿಗಳು, ಅನುಮತಿ ನೀಡಬಹುದಾದ ಕಾಮಗಾರಿಗಳ ವಿವರಗಳನ್ನು ಸಂಬಂದಪಟ್ಟ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಂದ ಪಡೆದು, ಅಗತ್ಯವಿರುವ ಅನುಮತಿಗಳನ್ನು ನೀಡುವಂತೆ ತಿಳಿಸಿದರು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಶೇ.79 ರಿಂದ 80 ರಷ್ಟು ಅರಣ್ಯ ಪ್ರದೇಶವಿದ್ದು, ಪಶ್ಚಿಮ ಘಟ್ಟದಲ್ಲಿ ವಿಶೇಷ ಜೀವ ವೈವಿಧ್ಯತೆ ಇದೆ. ಇವುಗಳನ್ನು ಉಳಿಸಿ ರಕ್ಷಿಸುವಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ.
ಹಲವು ಕಂದಾಯ ದಾಖಲೆಗಳಲ್ಲಿ ಅರಣ್ಯ ಭೂಮಿಯನ್ನು ಸರ್ಕಾರ ಎಂದು ದಾಖಲಿಸಿದ್ದು, ಇಂತಹ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ , ಇಲ್ಲವಾದಲ್ಲಿ ಅಂತಹ ಜಮೀನು ಹಂಚಿಕೆ ಮಾಡಿದಲ್ಲಿ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
Environmentally sensitive zone ಸಭೆಯಲ್ಲಿ ಹಂಗಾಮಿ ಲಾಗಣಿಗೆ ನೀಡಿದ ಪ್ರಕರಣ ಹಾಗೂ ಖಾಯಂ ಲಾಗಣಿ ಮಂಜೂರಿಸಿದ ಪ್ರಕರಣಗಳ ಬಗ್ಗೆ, 1978 ರ ಪೂರ್ವದ ಅರಣ್ಯ ಅತಿಕ್ರಮಣ ಸಕ್ರಮ ಕುರಿತು, ಅರಣ್ಯ ಪ್ರದೇಶದ ಇಂಡೀಕರಣ ಬಾಕಿ, ಪರಿಭಾವಿತ ಅರಣ್ಯ ಪ್ರದೇಶಗಳ (ಡೀಮ್ಡ್ ಫಾರೆಸ್ಟ್)ವಿವರ, ಬೆಟ್ಟ ಜಮೀನುಗಳ ಬಗ್ಗೆ.
ಡಿಸ್ ಫಾರೆಸ್ಟ್ ಜಮೀನು ಬಗ್ಗೆ, ಪರಿಶಿಷ್ಟ ವರ್ಗ ಹಾಗೂ ಇತರೆ ಅರಣ್ಯವಾಸಿಗಳ ಅರ್ಜಿಗಳ ಕುರಿತಂತೆ ವಿಸ್ತçತ ಚರ್ಚೆ ನಡೆಯಿತು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಡಿಎಫ್‌ಒ ರವಿಶಂಕರ್, ಎಸಿ ಕನಿಷ್ಕ ಇತರರು ಇದ್ದರು.