ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಮಾತನಾಡಿದರು. ಗ್ರಾಪಂ ಸದಸ್ಯ ಮಲ್ಲು ಜಗದಾಳ, ಮುಖ್ಯಶಿಕ್ಷ ಜಯಪ್ರಕಾಶ ಎಸ್. ಇದ್ದರು. 
ಜಿಲ್ಲೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

Vijayapura - Desk - Gurappa Lokuri

ಮಹಾಲಿಂಗಪುರ: ಪಟ್ಟಣ ಸಮೀಪದ ನಾಗರಾಳ ಗ್ರಾಮದ ಬನದ ವಸತಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ಅಡಿಯಲ್ಲಿ ಇತ್ತೀಚೆಗೆ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.

ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಮಾತನಾಡಿ, ಪಂಚ ಮಹಾಭೂತಗಳಾದ ಅಗ್ನಿ, ವಾಯು, ಜಲ, ಆಕಾಶ ಮತ್ತು ಭೂಮಿ ಮಾನವನ ದುರಾಸೆಯಿಂದ ಮಲಿನಗೊಂಡು ಮನುಷ್ಯನ ಆರೋಗ್ಯದ ಜೊತೆಗೆ ಆಯುಷ್ಯವೂ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ಜಾಗೃತಿ ವಿಷಯ ಅರಿತು ಪರಿಸರ ಸಂರಕ್ಷಿಸುವುದು ಅವಶ್ಯವಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮಲ್ಲು ಜಗದಾಳ ಮಾತನಾಡಿದರು.

ಶಾಲೆಯ ಮುಖ್ಯಶಿಕ್ಷಕ ಜಯಪ್ರಕಾಶ ಎಸ್. ನಿರೂಪಿಸಿದರು.

ಶಿಕ್ಷಕ ಪರಮಾನಂದ ಮಲ್ಲಾರಿ ಗಣ್ಯರಾದ ಮುತ್ತಪ್ಪಜ್ಜ ಒಡೆಯರ, ಯಮನಪ್ಪ ನಾಗರಾಳ, ಅವಧೂತಪ್ಪ ಒಡೆಯರ, ಲಕ್ಕಪ್ಪ ಕುಂದರಗಿ, ರಾಮಣ್ಣ ಸೆಂಡಗಿ, ಸಿದ್ದು ನಾಗರಾಳ, ಬಸವರಾಜ ಬಳಗಾರ ಇದ್ದರು.