ತಾಳಿಕೋಟೆ: ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕೆಂದು ಭಗೀರಥ ಸರ್ವಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದ ಕಾರ್ಯದರ್ಶಿ ಸುನೀಲ ಕುಮಾರ ಯರಕಿಹಾಳ ಹೇಳಿದರು.
ಪಟ್ಟಣದಲ್ಲಿ ಭಗೀರಥ ಸರ್ವಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರದ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿ, ಪರಿಸರ ಕಲುಷಿತಗೊಂಡಿದ್ದು, ಉತ್ತಮ ಗಾಳಿ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಪರಿಸರ ರಕ್ಷಿಸುವ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದರು.
ಕೇಂದ್ರ ಉಪಾಧ್ಯಕ್ಷ ಶಿವಾಜಿ ಯಡ್ರಾಮಿ, ಜೈತುನ ನದ್ಾ, ಶಿವಲಿಂಗಯ್ಯ ಆಲಗೂರ, ಪ್ರಕಾಶ ಬಬಲೇಶ್ವರ ಇದ್ದರು.
ಪೂರ್ವಭಾವಿ ಸಭೆ: ಭಗೀರಥ ಸರ್ವಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದ ಸದಸ್ಯರ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕುರಿತು ಜೂ. 29ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಬಾಲಾಜಿ ದೇವಸ್ಥಾನದಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.