ಚಿತ್ರದುರ್ಗ: ಪರಿಸರ ಸಂರಕ್ಷಣೆಯ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ ಎಂದು ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಚಂದ್ರದ್ರೋಣ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ವನ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಪೂಜ್ಯ ದ್ವಯರಿಂದ ಸ್ಥಾಪಿತವಾದ ಈ ವನಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾವೆಲ್ಲರೂ ಅವರ ಕನಸುಗಳನ್ನು ನನಸು ಮಾಡಬೇಕಿದೆ ಎಂದು ಆಶ್ರಮದ ಅಧ್ಯಕ್ಷರೂ ಆಗಿರುವ ಅವರು ಹೇಳಿದರು.
ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರ್‌ದಾಸ್‌ಜೀ ಸ್ವಾಮೀಜಿ ಅವರು ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವ ಸಲುವಾಗಿ 1943ರಿಂದಲೇ ಆಶ್ರಮದಲ್ಲಿ ಚಂದ್ರದ್ರೋಣ, ಧನ್ವಂತರಿ, ತಪೋ, ಮಧು ಹಾಗೂ ಸಂಜೀವಿನಿ ವನಗಳನ್ನು ನಿರ್ಮಿಸಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಗಣಿಬಾಧಿತ ಪ್ರದೇಶ ಹೋರಾಟ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ, ಜಾಗತೀಕರಣ,ನಾಗರೀಕರಣದ ನಡುವೆ ಸಕಲ ಜೀವರಾಶಿಗಳಿಗೂ ಅಗತ್ಯ, ಅನಿವಾರ್ಯವಾಗಿರುವ ಪ್ರಾಕೃತಿಕ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪರಿಸರ ಸಂರಕ್ಷಣೆಯ ಫಲಕಗಳನ್ನು ಹಿಡಿದಿದ್ದ ಆಶ್ರಮದ ನೂರಾರು ವಿದ್ಯಾರ್ಥಿಗಳು ಸಸಿ ನೆಟ್ಟರು. ಆಶ್ರಮದ ಆಡಳಿತ ಮಂಡಳಿ ಕಾ ರ್ಯದರ್ಶಿ ಎಸ್.ಕೆ. ಬಸವರಾಜನ್, ಟ್ರಸ್ಟಿ ಶ್ರೀನಿವಾಸ್, ಸಮಿತಿ ಸಂಸ್ಥಾಪಕ ಅಧ್ಯಕ್ಷ ರಮೇಶ್ ಬಿ. ದುರ್ಗ, ತಾಪಂ ಮಾಜಿ ಅಧ್ಯಕ್ಷ ಮೋಹನ್, ಡಿಸಿಸಿ ಕಾರ್ಯಾಧ್ಯಕ್ಷ ಹಾಲೇಶ್, ವಾಲ್ಮೀಕಿ ಸಂಘದ ಸುರೇಗೌಡ್ರು, ನಾಗರಾಜ್, ವಿಶ್ವನಾಥಹಳ್ಳಿ ಶಿವಕುಮಾರ್, ರಂಗಸ್ವಾಮಿ, ಗೌರಿ ರಾಜಕುಮಾರ್, ಕಾಟೀಹಳ್ಳಿ ಶಿವಣ್ಣ, ಶರತ್‌ಪಾಟೀಲ್, ಬಿ.ಜಿ. ಹಳ್ಳಿ ಜಯಣ್ಣ, ಪಾಂಡುರಂಗ ಸ್ವಾಮಿ, ಅಶೋಕ್, ಈಶ್ವರಪ್ಪ, ಪ್ರಶಾಂತ್, ಬೋರಣ್ಣ, ರವಿಮಲ್ಲಾಪುರ, ಕೆಂಗುಂಟೆ ಜಯಣ್ಣ, ರುದ್ರೇಶ್ ನಾಯಕನಹಟ್ಟಿ, ಲಕ್ಷಿ ್ಮೀಸಾಗರ ರಾಜಣ್ಣ, ಮದ್ದೇರು ಕುಬೇರಪ್ಪ ಇತರರು ಇದ್ದರು.