ಜಿಲ್ಲೆ

ಕಾರ್ಖಾನೆ ತ್ಯಾಜ್ಯದಿಂದ ಪರಿಸರ ಮಲಿನ

ಗಂಗಾಧರ ಬಿ ವಿ

* ಪರಿಸರ ಮಾಲಿನ್ಯ ಇಲಾಖೆ ವಿರುದ್ಧ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ರಾಮನಗರ

ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳಲ್ಲಿ ಕೆಮಿಕಲ್​ ಯುಕ್ತ ನೀರನ್ನು ಕೆರೆ, ಕುಂಟೆ ಕಾಲುವೆಗಳಿಗೆ ಹರಿಬಿಡುತ್ತಿದ್ದು, ಇದರಿಂದ ಜೀವ ಸಂಕುಲಕ್ಕೆ ತೊಂದರೆ ಉಂಟಾಗುತ್ತಿದೆ. ಪರಿಸರ ಮಾಲಿನ್ಯ ಇಲಾಖೆ ಕ್ರಮ ಕೈಗೊಳ್ಳುವಲ್ಲಿ ವಿಲವಾಗಿದೆ ಎಂದು ಆರೋಪಿಸಿ ರಾಮನಗರದ ಪರಿಸರ ಇಲಾಖೆ ಕಚೇರಿ ಮುಂದೆ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಎಂ. ಆಂಜನಪ್ಪ ಮಾತನಾಡಿ, ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳ ಕೆಲವು ಕಾರ್ಖಾನೆಗಳಲ್ಲಿ ಕೆಮಿಕಲ್​ ಯುಕ್ತ ನೀರು ಪರಿಸರದಲ್ಲಿ ಹರಿಯುತ್ತಿದೆ. ಜತೆಗೆ ಕಾರ್ಖಾನೆಗಳು ಉಗುಳುವ ಹೊಗೆ, ಶಬ್ಧಮಾಲಿನ್ಯಕ್ಕೆ ತಡೆ ಇಲ್ಲದಂತಾಗಿದೆ. ಶಬ್ಧ ಮಾಲಿನ್ಯದಿಂದ ಸುತ್ತಮುತ್ತಲ ಜನರು ತೊಂದರೆ ಅನುಭವಿಸಬೇಕಿದೆ ಎಂದರು.

ವಿಷಯುಕ್ತಗಾಳಿ, ಹೊಗೆ, ಶಬ್ಧಮಾಲಿನ್ಯ ಸೂಸುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ದೂರು ನೀಡಿದರೂ ಪರಿಸರ ಇಲಾಖೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆಗೆ ಬೇಸತ್ತು ಸಂಟನೆ ಪ್ರತಿಭಟನೆ ಹಾದಿ ಹಿಡಿದಿದೆ. ಕೂಡಲೇ ಪರಿಸರ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಪರಿಸರಕ್ಕೆ ಹಾನಿ ತರುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಪರಿಸರ ಇಲಾಖೆ ಮಾಲಿನ್ಯ ನಿಂತ್ರಣಾಧಿಕಾರಿ ಮಂಜುನಾಥ್​ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಅಂತಹ

ಕಾರ್ಖಾನೆಗಳಿಗೆ ನೋಟಿಸ್​ ನೀಡಲಾಗಿದೆ. ಪರಿಸರಕ್ಕೆ ಹಾನಿ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಅಲ್ಲಿಂದ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ ಅಧ್ಯಕ್ಷ ಆರ್​. ರಮೇಶ್​, ಕರ್ನಾಟಕ ದಲಿತ ಸಂರ್ಷ ಸಮಿತಿ ರಾಜ್ಯ ಸಂಟನಾ ಸಂಚಾಲಕ ಎಸ್​.ಚದ್ರಶೇಖರ್​, ಉಪಾಧ್ಯಕ್ಷ ಪಿ.ಮಂಜುನಾಥ್​, ಆಟೋ ಟಕ ಅಧ್ಯಕ್ಷ ದೀಪು, ಯುವ ಟಕ ಅಧ್ಯಕ್ಷ ವೆಂಕಟೇಶ್​, ಮುಖಂಡರಾದ ಎಚ್​.ಎಲ್​.ಆನಂದ್​, ನಾಗೇಶ್​, ಇಮ್ರಾನ್​ ಪಾಷ, ಅಕಲು, ರಾುಗೌಡ, ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟಪ್ಪ ಮತ್ತಿತರರು ಇದ್ದರು.

ಕಾರ್ಖಾನೆಗಳಿಂದ ಹೊರ ಪ್ರದೇಶದ ನೀರು ಕಾಲುವೆಗಳಿಗೆ ಕೆಮಿಕಲ್​ಯುಕ್ತ ನೀರು ಹರಿಯಬಿಟ್ಟು ಕೆರೆಯ ನೀರನ್ನು ಮಲಿನ ಮಾಡಿ ಜಾನುವಾರುಗಳಿಗೆ, ವ್ಯವಸಾಯಕ್ಕೆ ಯೋಗ್ಯವಿಲ್ಲದಂತೆ ಇಡೀ ಪರಿಸರಕ್ಕೆ ಮಾರಕವಾಗುವಂತೆ ಮಾಡುತ್ತಿದ್ದಾರೆ. ಕಾರ್ಖಾನೆಗಳಲ್ಲಿ ಹೊಗೆ ನಿಯಂತ್ರಣ ಮಾಡದೆ ಇಡೀ ಪ್ರದೇಶದಲ್ಲಿ ಶುದ್ಧ ಗಾಳಿ ಬರದಂತೆ ಪರಿಸರಕ್ಕೆ ವಿರುದ್ಧವಾಗಿ ಕೆಲವು ಕಾರ್ಖಾನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಎಂ. ಆಂಜನಪ್ಪ, ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ