ತುಮಕೂರು: ಪ್ರತಿ ವರ್ಷದಂತೆ ಈ ವರ್ಷವು ಗಣೇಶೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ವಣೋರ್ದಯ ಆರ್ಟ್ ಗ್ರೂಪ್ ಟ್ರಸ್ಟ್ ಹಾಗೂ ಪ್ರೆಸ್ಕ್ಲಬ್ ತುಮಕೂರು ಸಹಯೋಗದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಾಣ ಕಾರ್ಯಾಗಾರವನ್ನು ಸೆ.1 ರಂದು ನಗರದ ಬಿ.ಎಚ್.ರಸ್ತೆಯ ಪ್ರೆಸ್ಕ್ಲಬ್ ಆಲದಮರ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಸಹಯೋಗದಲ್ಲಿ ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು 5 ರಿಂದ 10 ನೇ ತರಗತಿಯ ಮಕ್ಕಳಿಗೆ ಗಣೇಶೋತ್ಸವ ಅಂಗವಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಕಾರ್ಯಾಗಾರವನ್ನು ವಣೋರ್ದಯ ಆರ್ಟ್ ಗ್ರೂಪ್ ಕಲಾವಿದರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ.
150 ಮಕ್ಕಳಿಗೆ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದ್ದು ಮೊದಲು ನೋಂದಣಿ ಮಾಡಿಸಿಕೊಂಡವರಿಗೆ ಅವಕಾಶ ಇರಲಿದೆ. ಸೆ.1ರಂದು ಬೆಳಗ್ಗೆ 8.30 ರಿಂದ ನೋಂದಣಿ ಆರಂಭಿಸಲಿದ್ದು 50 ರೂ., ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಮಕ್ಕಳು ಪೋಷಕರೊಂದಿಗೆ ಬರುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಮೊ:9986009854, 8310756559, 9731440602 ಸಂಪರ್ಕಿಸಬಹುದು.