ಅಳವಂಡಿ ಸಮೀಪದ ಹೈದರನಗರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಬಂಜಾರ ಸಂಘದಿಂದ ಗಿಡ ನೆಡಲಾಯಿತು. ಪ್ರಮುಖರಾದ ರವಿಕುಮಾರ, ವಿರೂಪಾಕ್ಷಿ, ರಾಜೇಶ, ಚಂದ್ರಶೇಖರ ಇತರರಿದ್ದರು. 
ಜಿಲ್ಲೆ

ಮರಗಳ ನಾಶದಿಂದ ಪರಿಸರದಲ್ಲಿ ಏರುಪೇರು

ಅಳವಂಡಿ: ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವುದು ಎಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಗಿಡ ನೆಟ್ಟು ಮನೆಗೊಂದು ಗಿಡ, ಊರಿಗೊಂದು ವನ ಪದ್ಧತಿ ಅನುಸರಿಸೋಣ ಎಂದು ಬಂಜಾರ ಯುವಕ ಸಂಘದ ಅಧ್ಯಕ್ಷ ರವಿಕುಮಾರ್ ಬಡಿಗೇರ ಹೇಳಿದರು.

ಸಮೀಪದ ಹೈದರನಗರ ಗ್ರಾಮದ ಸಹಿಪ್ರಾ ಶಾಲಾ ಆವರಣದಲ್ಲಿ ಬಂಜಾರ ಯುವಕ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರಗಳ ನಾಶದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಲಿದೆ. ಆದ್ದರಿಂದ ಮರಗಳನ್ನು ಉಳಿಸುವುದು ಅವಶ್ಯವಾಗಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು. ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಪ್ರಮುಖರಾದ ವಿರೂಪಾಕ್ಷಿ ಬಡಿಗೇರ, ರಾಜೇಶ, ಚಂದ್ರಶೇಖರ ಪೂಜಾರಿ, ರಾಹುಲ್, ಗಣೇಶ ಬಡಿಗೇರ, ಸಚಿನ್ ಬಡಿಗೇರ, ಸುನಿಲ್ ಕಾಳು, ಚಂದ್ರು ಸಾಹುಕಾರ, ಸಂಜು ನಾಯಕ ಇತರರಿದ್ದರು.