ಜಿಲ್ಲೆ

ಮಕ್ಕಳಿಗೆ ಪರಿಸರ ಕಾಳಜಿ ಮುಖ್ಯ

ರವಿ ಎಸ್. ಬಳೂಟಗಿ

ಲಕ್ಷೇಶ್ವರ: ಭೂಮಿ ಮತ್ತು ಪರಿಸರ ಕಾಳಜಿಯನ್ನು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬೆಳೆಸುವ ಕಾರ್ಯ ಮಾಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಭರತ್ ಯೋಗೀಶ ಕರಗುದರಿ ಹೇಳಿದರು.

ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ ಲಕ್ಷ್ಮೇಶ್ವರ, ವಕೀಲರ ಸಂಘ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ಭೂ ದಿನದ ಪ್ರಯುಕ್ತ ನ್ಯಾಯಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ಭೂಮಿಯೊಂದಿಗೆ ಭಾರತೀಯ ಸಂಸ್ಕೃತಿಯಲ್ಲಿ ಅವಿನಾಭಾವ ಸಂಬಂಧವಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಅದರ ಕೊಂಡಿ ಕಳಚಿದೆ. ಅದನ್ನು ಮತ್ತೆ ಕೂಡಿಸುವುದರೊಂದಿಗೆ ಪರಿಸರ ಉಳಿಸುವ ಕೆಲಸವಾಗಬೇಕು ಎಂದರು. ಹಿರಿಯ ವಕೀಲ ಎಸ್.ಪಿ. ಬಳಿಗಾರ, ಸಹಾಯಕ ಅರಣ್ಯಾಧಿಕಾರಿ ಮೇಘನಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ವಿ. ನೇಕಾರ, ಪ್ರ.ಕಾರ್ಯದರ್ಶಿ ವಿ.ಎಸ್. ಪಶುಪತಿಹಾಳ, ಹಿರಿಯ ವಕೀಲರಾದ ಬಿ.ಎಸ್. ಬಾಳೇಶ್ವರಮಠ, ವಿ.ಆರ್. ಪಾಟೀಲ, ಎ.ಟಿ. ಕಟ್ಟಿಮನಿ, ಎಸ್.ಡಿ. ಕಮತದ, ಆರ್.ಎಂ. ಪೂಜಾರ, ಪಿ.ಎಂ. ವಾಲಿ, ಎ.ಎ. ಬೇವಿನಗಿಡದ, ಎಸ್.ವೈ. ಗೊಬ್ಬರಗುಂಪಿ, ಆರ್.ಎಂ. ಕುರಿ. ಎಸ್. ಎಚ್. ಮುಳಗುಂದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚೌಹಾಣ, ಇತರರಿದ್ದರು.