ಮೂಲ್ಕಿ: ಪರಿಸರ ರಕ್ಷಣೆ ಜತೆಗೆ ಗಿಡ ಮರಗಳನ್ನು ಬೆಳೆಸುವ ಮೂಲಕ ಜೀವಾನಿಲದ ವೃದ್ಧಿ ಹಾಗೂ ಆರೋಗ್ಯಪೂರ್ಣ ಬದುಕು ನಮ್ಮದಾಗುತ್ತದೆ ಎಂದು ಶ್ರೀವಿದ್ಯಾ ವಿನಾಯಕ ಯುವಕ ಮಂಡಲ ಅಧ್ಯಕ್ಷ ನಾಗೇಶ್ ಟಿ.ಜಿ. ಹೇಳಿದರು.
ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ ಭಾರತ್ ಮಂಗಳೂರು, ಹಿಂದು ರುದ್ರಭೂಮಿ ಹಳೆಯಂಗಡಿ, ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಆಶ್ರಯದಲ್ಲಿ ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮತ್ತು ಮಹಿಳಾ ಮಂಡಲ ಹಳೆಯಂಗಡಿ ಸಹಕಾರದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಭಾನುವಾರ ಸಸಿ ನೆಡುವ, ವೃಕ್ಷ ಸಂರಕ್ಷಣೆ, ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಹಿಂದು ರುದ್ರಭೂಮಿ ಇಂದಿರಾನಗರ ಬಳಿ ಸಸಿನೆಟ್ಟು ಚಾಲನೆ ನೀಡಿ ಮಾತನಾಡಿದರು.
ಹಳೆಯಂಗಡಿ ಗ್ರಾಪಂ ಸದಸ್ಯ ನಾಗರಾಜ್ ಪೂಜಾರಿ, ಯುವಕ ಮಂಡಲ ಉಪಾಧ್ಯಕ್ಷ ಧನಂಜಯ ಕದ್ರಿತೋಟ, ಪ್ರಧಾನ ಕಾರ್ಯದರ್ಶಿ ಹಿಮಕರ ಕದಿಕೆ, ಮಹಿಳಾ ಮಂಡಲ ಅಧ್ಯಕ್ಷೆ ರಶ್ವಿತ, ಪ್ರಧಾನ ಕಾರ್ಯದರ್ಶಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಯುವಕ ಮಂಡಲ ಸದಸ್ಯರಾದ ಯತೀಶ್ ಕೋಟ್ಯಾನ್, ಸುಧಾಕರ ಆರ್.ಅಮೀನ್, ತಾರಾನಾಥ ಕೊಳುವೈಲು, ಲೋಕೇಶ್ ಚಿಲಿಂಬಿ, ಜಗದೀಶ್ ಪಲಿಮಾರ್, ಉದಯಕುಮಾರ್, ಭವಾನಿ ಶಂಕರ್, ಮನೋಜ್ ಕುಮಾರ್, ಸುಹಾಸ್ ಗೋಳಿದಡಿ ಉಪಸ್ಥಿತರಿದ್ದರು.