ರಾಯಬಾಗ ಪಟ್ಟಣದ ಎಸ್‌ಪಿಎಂ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಸಸಿ ನೆಡಲಾಯಿತು. ಶಿಕ್ಷಣ ಪ್ರಸಾರಕ ಮಂಡಳದ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ, ಎಸ್.ಎಸ್.ಶಿಂಗಾಡಿ, ಎಸ್.ಎಸ್.ಕುರಬೇಟಿ ಇತರರು ಇದ್ದರು. 
ಜಿಲ್ಲೆ

ಪರಿಸರ ಉಳಿವು ನಮ್ಮೆಲ್ಲರ ಜವಾಬ್ದಾರಿ

ಪ್ರಶಾಂತ ಹೂಗಾರ

ರಾಯಬಾಗ: ನಶಿಸಿ ಹೋಗುತ್ತಿರುವ ಪರಿಸರವನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಿಕ್ಷಣ ಪ್ರಸಾರಕ ಮಂಡಳದ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಹೇಳಿದರು.

ಪಟ್ಟಣದ ಎಸ್‌ಪಿಎಂ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಬುಧವಾರ ಸಸಿ
ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಳಿಕ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾನಗರದಲ್ಲಿರುವ ಮನೆಗೆ ತೆರಳಿ ಸಸಿ ವಿತರಿಸಿದರು. ಕಾರ್ಯದರ್ಶಿ ಎಸ್.ಎಸ್.ಶಿಂಗಾಡಿ, ಪ್ರಾಂಶುಪಾಲ ಎಸ್.ಎಸ್.ಕುರಬೇಟಿ, ಅಶ್ವಿನಿ ಹನೋಲೆ, ಉಪನ್ಯಾಸಕರಾದ ಪಿ.ಆರ್.ಸವದತ್ತಿ, ಎಸ್.ಎಂ.ಲೈನದಾರ, ಎಂ.ಎ.ಹಂಜಿ, ಈಶ್ವರ ಪತ್ತಾರ, ಮುರಸಿದ್ಧ ಕಠಾರೆ, ರಾಮು ಕಾಕಡೆ ಹಾಗೂ ವಿದ್ಯಾರ್ಥಿಗಳು ಇದ್ದರು.