ಗುಡೇಕೋಟೆ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು. ಗ್ರಾಪಂ ಅಧ್ಯಕ್ಷ ಕೆ.ಕೃಷ್ಣ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಜಗದೀಶ್, ಪಿಡಿಒ ಬಸಮ್ಮ, ಸದಸ್ಯರಾದ ಎಸ್.ಬೊಮ್ಮಣ್ಣ, ಕೆ.ಮಂಜುನಾಥ, ಮುಖಂಡ ಪೇಂಟ್ ತಿಪ್ಪೇಸ್ವಾಮಿ ಇತರರಿದ್ದರು. 
ಜಿಲ್ಲೆ

ಪರಿಸರ ಉಳಿಸಿ ಬೆಳೆಸಲು ಕಾಳಜಿ ತೋರಿ

ರುದ್ರಪ್ಪ ವಾಲಿ

ಕೂಡ್ಲಿಗಿ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಆಯೋಜಿಸುವ ಸಸಿ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಹೇಳಿದರು.

ಗುಡೇಕೋಟೆ ಕೆಪಿಎಸ್ ಪ್ರೌಢಶಾಲೆಯಲ್ಲಿ ವಲಯ ಅರಣ್ಯ ಇಲಾಖೆ ಹಾಗೂ ಗುಡೇಕೋಟೆ ಗ್ರಾಪಂ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಮಾತನಾಡಿದರು. ಪ್ರಾಣಿ, ಪಕ್ಷಿ, ಕಾಡು ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.

ಉಪ ಪ್ರಾಚಾರ್ಯೆ ರುಕ್ಮಿಣಿಬಾಯಿ ಮಾತನಾಡಿ, ಪ್ರತಿಯೊಬ್ಬರೂ ಮನೆಗಳ ಮುಂದೆ ಗಿಡಗಳನ್ನು ನೆಟ್ಟು ಅವುಗಳನ್ನು ಸ್ನೇಹಿತರಂತೆ ಪ್ರೀತಿಸಿ ಬೆಳೆಸಬೇಕು. ಪ್ರಕೃತಿಗೆ ಹಾನಿ ಮಾಡದಂತೆ ಪರಿಸರ ಸಂರಕ್ಷಣೆಗೆ ಪೂರಕವಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.