ಧಾರವಾಡ: ವಿದೇಶಿ ಆಚರಣೆಯಾಗಿರುವ ಪ್ರೇಮಿಗಳ ದಿನವನ್ನು ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತç ವಿಭಾಗದ ವಿದ್ಯಾರ್ಥಿಗಳು ಪರಿಸರ ಪ್ರೇಮಿಗಳ ದಿನವನ್ನಾಗಿ ಆಚರಿಸಿದ್ದಾರೆ. ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ವಿಭಾದ ಎಲ್ಲ ವಿದ್ಯಾರ್ಥಿಗಳು ಒಂದೊAದು ಸಸಿಗಳನ್ನು ದತ್ತು ಪಡೆದಿದ್ದಾರೆ. ತಾವು ವಿಭಾಗದಲ್ಲಿ ಇರುವಷ್ಟು ದಿನ ಸಸಿಗಳನ್ನು ಜೋಪಾನ ಮಾಡುವ ಸಂಕಲ್ಪ ಮಾಡಿದ್ದಾರೆ. ವಿಶೇಷವೆಂದರೆ ವಿದ್ಯಾರ್ಥಿಗಳು ಸ್ವಂತ ಹಣದಿಂದ ಈ ವಿಶಿಷ್ಟ ಕಾರ್ಯಕ್ರಮ ಮಾಡಿದ್ದಾರೆ.
ರಾಜ್ಯಶಾಸ್ತç ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಜಿ. ಖಾನ್, ವಿಭಾಗದ ಮುಖ್ಯಸ್ಥ ಡಾ. ಬಿ.ಎಂ. ರತ್ನಾಕರ ಅತಿಥಿಯÁಗಿ ಪಾಲ್ಗೊಂಡಿದ್ದರು.