ಸಿದ್ದಾಪುರ: ಪರಿಸರ ಎಂದರೆ ನಮ್ಮ ಬದುಕಿನ ಆಸರೆ. ಅದನ್ನು ಸರಿಯಾಗಿ ಇಟ್ಟುಕೊಂಡಲ್ಲಿ ಮಾತ್ರ ಜಾಗತಿಕ ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದು ಲಯನ್ಸ್ ಮಾಜಿ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಹೇಳಿದರು.
ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಜಾಗತಿಕ ಶಾಂತಿ ಸಂದೇಶ ನೀಡುವ ಭಿತ್ತಿ ಚಿತ್ರ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜೋನ್ ಚೇರ್ ಪರ್ಸನ್ ಶಾಮಲಾ ಹೆಗಡೆ, ಜಿಲ್ಲಾ ಚೇರ್ಮನ್ ಸತೀಶ ಗೌಡರ್, ಕಾರ್ಯದರ್ಶಿ ಕುಮಾರ ಗೌಡರ್, ಖಜಾಂಚಿ ಆಕಾಶ ಹೆಗಡೆ, ಉಪಾಧ್ಯಕ್ಷ ಎಂ.ಆರ್. ಪಾಟೀಲ್ ಇತರರಿದ್ದರು. ಸ್ಪರ್ಧಾ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.