ಜಿಲ್ಲೆ

ಪರಿಸರ ನಾಶಕ್ಕೆ ಮುಂದಾಗದಿರಿ

ಅಶೋಕ್ ಕುಮಾರ್ ಎನ್

ಗುರುಗುಂಟಾ: ಗೌಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಪಂ ಮಾಜಿ ಸದಸ್ಯ ರಾಜಾಸೇತುರಾಮ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಶಿಕ್ಷಕ ಎಂ.ಎಸ್.ತಮ್ಮಣ್ಣ ಮಾತನಾಡಿ, ಪರಿಸರ ಬೆಳೆಸುವುದರಿಂದ ಮನುಕುಲಕ್ಕೆ ಶುದ್ಧ ಗಾಳಿ, ಆಹಾರದೊಂದಿಗೆ ಆಶ್ರಯ ಸಿಗಲಿದೆ. ಜನರು ವೈಯಕ್ತಿಕ ಅನುಕೂಲಕ್ಕಾಗಿ ಪರಿಸರ ನಾಶ ಮಾಡಬಾರದು ಎಂದು ಸಲಹೆ ಮಾಡಿದರು. ಶಿಕ್ಷಕ ಚಿದಾನಂದ ಮಾತನಾಡಿ, ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರವನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಹುಚ್ಚಪ್ಪ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರಸಕ್ತ ವರ್ಷ 10 ಲಕ್ಷ ಗಿಡಗಳನ್ನು ನಾಟಿ ಮಾಡುವ ಸಂಕಲ್ಪ ಹೊಂದಿದ್ದಾರೆ. ತಾಲೂಕಿನಲ್ಲಿ ಏಳು ಸಾವಿರ ಸಸಿಗಳು ನಾಟಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.