ನಗರದ ಎಸ್​.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಶುಕ್ರವಾರ ಸಕ್ಕರೆ ಕಾರ್ಖಾನೆ ಹಾಗೂ ಡಿಸ್ಟಿಲರಿ ಟಕಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಕುರಿತು ಒಂದು ದಿನದ ವಿಚಾರ ಸಂಕಿರಣ ಜರುಗಿತು. ಗೋಪಾಲ ಕೃಷ್ಣ , ಸಿ.ಬಿ. ಪಾಟೀಲ್​, ಡಾ.ಗೋವಿಂದ ಮಿಸಾಳೆ, ಮೋಹನ ಕೆ. ಡೊಂಗರೆ, ಕಿರಣ ಕಶ್ಯಪ್​, ಚಿದಾನಂದ ರುಗೆ ಇತರರಿದ್ದರು. 
ಜಿಲ್ಲೆ

ಪರಿಸರ ಇಲಾಖೆ ಮಾರ್ಗಸೂಚಿ ಪಾಲಿಸಿ: ಗೋಪಾಲ ಕೃಷ್ಣ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಸಕ್ಕರೆ ಉದ್ಯಮದ ಕೈಗಾರಿಕೆಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ನಿಯಂತ್ರಿಸಬೇಕಿದ್ದು, ಪರಿಸರ ಇಲಾಖೆ ಮಾರ್ಗಸೂಚಿ ಪಾಲಿಸಬೇಕು ಹಾಗೂ ಆಧುನಿಕ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಲಯ ಪರಿಸರ ಅಧಿಕಾರಿ ಗೋಪಾಲ ಕೃಷ್ಣ ಕೈಗಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಿದರು.

ನಗರದ ಎಸ್​.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಕ್ಕರೆ ಕಾರ್ಖಾನೆ ಹಾಗೂ ಡಿಸ್ಟಿಲರಿ ಟಕಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಅಧಿಕಾರಿ ರವಿ ಪಟ್ಟಣಶೆಟ್ಟಿ ಮಾತನಾಡಿ, ಸಕ್ಕರೆ ಕೈಗಾರಿಕೆಗಳು ಪ್ರಾಯೋಗಿಕವಾಗಿ ಎದುರಿಸಲ್ಪಡುವ ಸವಾಲು ಮತ್ತು ಪರಿಸರ ಇಲಾಖೆಗಳ ನಡುವಿನ ಸಮನ್ವಯದ ಮಹತ್ವ ತಿಳಿಸಿದರು. ಎಸ್​.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಕ್ಕರೆ ತಂತ್ರಜ್ಞಾನ ಹಾಗೂ ನಿರ್ದೇಶಕ (ಪ್ರಭಾರ) ಸಿ.ಬಿ. ಪಾಟೀಲ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಶುಗರ್ಸ್​ ಲಿಮಿಟೆಡ್​ ಉಪಾಧ್ಯಕ್ಷ ಡಾ.ಗೋವಿಂದ ಮಿಸಾಳೆ, ಮೋಹನ ಕೆ. ಡೊಂಗರೆ, ಕಿರಣ ಕಶ್ಯಪ್​, ಚಿದಾನಂದ ರುಗೆ ಇತರರಿದ್ದರು.