ಹುಬ್ಬಳ್ಳಿ: ಪ್ರತಿಯೊಂದು ಜೀವಿಯ ಜೀವಿತ ಮತ್ತು ವಿಕಾಸಕ್ಕೆ ನೈಸರ್ಗಿಕ ಸಂಪನ್ಮೂಲಗಳಾದ ವಾಯು, ಜಲ, ಪೃಥ್ವಿ, ಆಕಾಶ, ವನ ಇವು ಪೂರಕವಾದ ಸಾಧನಗಳಾಗಿವೆ ಎಂದು ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಗಂಗಾಧರ ದೊಡ್ಡವಾಡ ಹೇಳಿದರು.
ನಗರದ ಗೋಕುಲ ರಸ್ತೆ ಅರ್ಜುನ ವಿಹಾರ ಹನುಮಂತ ದೇವರ ದೇವಸ್ಥಾನ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ಪರಿಶುದ್ಧ ಆಮ್ಲಜನಕ, ನೀರು, ಸ್ವಚ್ಛ ವಾತಾವರಣವನ್ನು ಕಾಪಾಡುವುದರಿಂದ ಎಲ್ಲರೂ ರೋಗಗಳಿಂದ ದೂರ ಇರಬಹುದು. ಇದಕ್ಕೆ ವನ್ಯ ಸಂಪತ್ತನ್ನು ಅಭಿವೃದ್ಧಿಪಡಿಸುವುದೊಂದೇ ಉತ್ತಮ ಮಾರ್ಗ ಎಂದರು.
ತಾಲೂಕು ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮಾದೇವಿ ಹಿರೇಮಠ, ಪ್ರಭಾವತಿ ಮಠದ, ಕೃಷ್ಣಕುಮಾರ ಬಾಕಳೆ, ವೈ.ಎಸ್. ಪಾಟೀಲ್, ಲೀಲಾವತಿ ಅರಟಾಳ, ಫಕ್ಕಿರೇಶ್ ಚಿಕ್ಕಮಠ, ಮೃತ್ಯುಂಜಯ ಹಿರೇಮಠ, ಶಶಿಕಲಾ ಶಾಸ್ತ್ರಿಮಠ, ನಿರ್ಮಲಾ ಹಿರೇಮಠ, ವಂದನಾ ಕರಾಳೆ ಮುಂತಾದವರು ಉಪಸ್ಥಿತರಿದ್ದರು.