ಜಿಲ್ಲೆ

ಸ್ವಾಮಿನಾರಾಯಣ ಗುರುಕುಲ ಶಾಲೆಯಲ್ಲಿ ಪರಿಸರ ದಿನಾಚರಣೆ

ಕಿರಣ್ ಗೌಡ.ಜಿ

ಕೆ.ಆರ್.ಸಾಗರ: ಪಟ್ಟಣದ ಸ್ವಾಮಿನಾರಾಯಣ ಗುರುಕುಲ ಅಂತಾರಾಷ್ಟ್ರೀಯ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಗುರುವಾರ ಆಚರಿಸಲಾಯಿತು.

ನಮ್ಮ ಭೂಮಿ ಕಾಪಾಡೋಣ, ನಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸೋಣ, ನಮ್ಮಿಂದಲೇ ಬದಲಾವಣೆ ಆರಂಭವಾಗಲಿ ಎಂಬ ಘೋಷವಾಕ್ಯಗಳೊಂದಿಗೆ ಶಾಲೆಯ ಮಕ್ಕಳು ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನ ಆಚರಿಸಿದರು. ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆ ಕುರಿತು ಶಾಲೆಯ ಪ್ರಾಂಶುಪಾಲ ಶ್ರೀ ಹರ್ಷ ಜೋಷಿ ಮಾಹಿತಿ ನೀಡಿದರು. ಹರಿವಂದನ್‌ದಾಸ್ ಸ್ವಾಮೀಜಿ ಮಾರ್ಗದರ್ಶನದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಶಾಲೆಯ ಸಂಯೋಜಕ ಸತೀಶ್, ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.