ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಶ್ರೀಪಾದ ನಗರ ನಿವಾಸಿಗಳ ಸಂಘ, ಶ್ರೀಪಾದನಗರ ಮಹಿಳಾ ಮಂಡಳ ವತಿಯಿಂದ ಶ್ರೀಪಾದನಗರದ ಉದ್ಯಾನದಲ್ಲಿ ಜು. 6ರಂದು ಬೆಳಗ್ಗೆ 10.30ಕ್ಕೆ ವಿಶ್ವ ಪರಿಸರ ದಿನ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಎಂ.ಎಸ್. ಮಲ್ಲಾಪುರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅರವಿಂದ ಬೆಲ್ಲದ ಸಮಾರಂಭ ಉದ್ಘಾಟಿಸುವರು. ಅತಿಥಿಗಳಾಗಿ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಬಿ.ಡಿ. ಪಾಟೀಲ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಪಂಡಿತ್ ಮುಂಜಿ, ಡಾ. ಸುಭಾಷ ಬಬ್ರುವಾಡ, ಶಾರದಾ ಗೋಪಾಲ, ಜಯಶ್ರೀ ಗೌಳಿ, ಶಿವಶಂಕರ ಐಹೊಳೆ ಆಗಮಿಸಲಿದ್ದಾರೆ. ಎಸ್.ಎನ್. ಪುರಾಣಿಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅಧ್ಯಕ್ಷ ಎಸ್.ಎಸ್. ಜಂಬಗಿ, ಉಪಾಧ್ಯಕ್ಷ ಎಸ್.ಎನ್. ಪುರಾಣಿಕ, ಎಂ.ಕೆ. ನದಾಫ, ಇತರರು ಇದ್ದರು.