ತಿತಿಮತಿ ವಲಯ ಅರಣ್ಯಾಧಿಕಾರಿ ಚನ್ನವೀರೇಶ್ ಗಿಡ ನೆಡುವ ಮೂಲಕ ಸಿದ್ದಾಪುರದಲ್ಲಿ ಸೋಮವಾರ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು. 
ಜಿಲ್ಲೆ

ಪರಿಸರ ದಿನಾಚರಣೆ

ಸಿದ್ದಾಪುರ: ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ವತಿಯಿಂದ ಭಾನುವಾರ ದಿಡ್ಡಳ್ಳಿ ಹಾಡಿ ಹಾಗೂ ಮಾಲ್ದಾರೆ ಅಂಗನವಾಡಿ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ಚನ್ನವೀರೇಶ್ ಅವರು ಅರಣ್ಯ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಮಾಲ್ದಾರೆ ಗ್ರಾಪಂ ಸದಸ್ಯರಾದ ಅಪ್ಪಾಜಿ, ಶೋಭಾ, ವಲಯ ಮೇಲ್ವಿಚಾರಕ ಪ್ರದೀಪ್, ಕೃಷಿ ಮೇಲ್ವಿಚಾರಕ ರಾಕೇಶ್, ಸೇವಾ ಪ್ರತಿನಿಧಿ ರೂಪೇಶ್, ಒಕ್ಕೂಟ ಅಧ್ಯಕ್ಷ ಜೈಮಿ ಉಪಸ್ಥಿತರಿದ್ದರು.