ವಿಜಯವಾಣಿ ಸುದ್ದಿಜಾಲ ಬೈಂದೂರು
ಶಿಕ್ಷಣದ ಜತೆ ಪರಿಸರ ಸಂರಕ್ಷಣೆ ಬಹಳ ಮುಖ್ಯವಾಗಿದ್ದು, ಇಂತಹ ಕಾರ್ಯಕ್ರಮಗಳ ಆಯೋಜನೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಲ್ಲಿ ಪ್ರಾಮುಖ್ಯತೆ ಪಡೆದಿದೆ. ಹಿರಿಯರ ಜತೆ ಕಿರಿಯರು ಕೈಜೋಡಿಸಿದರೆ ಪರಿಸರ ಸಂರಕ್ಷಣೆ ಸುಲಭ ಎಂದು ಧ.ಗ್ರಾ.ಯೋ ಮೆಕ್ಕೆ ಒಕ್ಕೂಟ ಅಧ್ಯಕ್ಷ ಎಂ.ಜೆ.ಬೇಬಿ ಹೇಳಿದರು.
ಕೊಲ್ಲೂರು ವಲಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಜಡ್ಕಲ್ ಗ್ರಾಮದ ಬಿಸಿನಪಾರೆ ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಮಾಹಿತಿ ಹಾಗೂ ಚಿತ್ರಕಲೆ, ಪ್ರಬಂಧ, ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕೊಲ್ಲೂರು ವಲಯ ಅಧ್ಯಕ್ಷ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕೊಲ್ಲೂರು ವಲಯ ಮೇಲ್ವಿಚಾರಕ ರಾಜು ಎಸ್.ಜಿ ಮಾತನಾಡಿದರು. ತೀರ್ಪುಗಾರರಾಗಿ ಹೆರಿಯಣ್ಣ ಶೆಟ್ಟಿ, ಬಾಲಕೃಷ್ಣ, ಅನಿತಾ, ಅನುಪಮಾ ಶಾಜಿ, ದಿನಕರ್, ಪ್ರಮೋದಾ ಉಪಸ್ಥಿತರಿದ್ದರು. ರೇವತಿ ಶೆಟ್ಟಿ ಸ್ವಾಗತಿಸಿದರು. ರೇಷ್ಮಾ ವಂದಿಸಿದರು. ರಾಮ ಶೆಟ್ಟಿ ಅತ್ತಿಕಾರ್ ನಿರೂಪಿಸಿದರು.