ಜಿಲ್ಲೆ

ಸಸ್ಯಗಳು ಜೀವ ವೈವಿಧ್ಯತೆಯ ಪ್ರತಿಕ

Dharwada - Basavaraj Idli

ಹುಬ್ಬಳ್ಳಿ: ಸಸ್ಯಗಳಿಂದ ನಮಗೆ ಅನೇಕ ಉಪಯೋಗಗಳಿವೆ, ಆಹಾರ, ಆಕ್ಷಿಜನ್, ಹೂವು, ಹಣ್ಣು-ಕಾಯಿ, ಉರುವಲು, ಜೇಣು ಮತ್ತು ಮನೋರಂಜನೆಯನ್ನು ಅವು ನೀಡುತ್ತವೆ. ಸಸ್ಯಗಳು ಜೀವ ವೈವಿಧ್ಯತೆಯ ಪ್ರತಿಕವಾಗಿವೆ ಎಂದು ತಾಲೂಕಿನ ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ನಿರ್ಮಲಾ ಕಟಕಧೊಂಡ ಹೇಳಿದರು.

ಡಾ. ಸಲೀಂ ಅಲಿ ಇಕೋ ಕ್ಲಬ್, ಸರ್ ಸಿ.ವಿ. ರಾಮನ್ ವಿಜ್ಞಾನ ಸಂಘ, ಮೇಜರ್ ಧ್ಯಾನ್ಚಂದ ಕ್ರೀಡಾ ಕ್ಲಬ್ಗಳ ಸಹಯೋಗದಲ್ಲಿ ತಾಲೂಕಿನ ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೈಹಿಕ ಶಿಕ್ಷಣ ಶಿಕ್ಷಕ ಗುರುನಾಥ ಬರದೇಲಿ ಮಾತನಾಡಿ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು. ಸಸಿಗಳ ಸಂರಕ್ಷಣೆ ಜವಾಬ್ದಾರಿಯನ್ನು ಎಲ್ಲರೂ ನಿಭಾಯಿಸಬೇಕು ಎಂದರು.

ಶಿಕ್ಷಕರಾದ ನಿವೇದಿತಾ ಗಾಂವಕಾರ, ಅಮೀರಾಬಾನು ದಲಾಲ, ಸಂಜೀವಕುಮಾರ ಭೂಶೆಟ್ಟಿ, ಸುರೇಶ ನಾಯಕ್, ಪಿ.ಕೆ. ಪತ್ತಾರ, ಸುಮಂಗಲಾ ವಿಠ್ಠಣ್ಣವರ, ದೇವಿ ಪ್ರಸಾದ, ವಿಜಯಲಕ್ಷ್ಮಿ, ಬಸಪ್ಪ ನವಲಗುಂದ, ಸವಿತಾ ಚನಶೆಟ್ಟಿ, ಉಪಸ್ಥಿತರಿದ್ದರು.