ಜಿಲ್ಲೆ

ಯಾಣ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ

Uttara Kannada - Subash Hegde

ಕಾರವಾರ: ಭಾರಿ ಮಳೆ ಹಿನ್ನೆಲೆಯಲ್ಲಿ ಯಾಣಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಽಸಲಾಗಿದೆ. ಉತ್ತರ ಕನ್ನಡ ಜಿಲ್ಲಾಽಕಾರಿ ಆದೇಶದಂತೆ, ಕೆನರಾ ವೃತ್ತ ಅರಣ್ಯ ಸಂರಕ್ಷಣಾಽಕಾರಿಗಳ ಸೂಚನೆಯಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಯಾಣದಲ್ಲಿ ಹಾಗೂ ವಿವಿಧ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕುಮಟಾ ಭಾಗದಿಂದ ತೆರಳುವವರಿಗೆ ಪಾರ್ಕಿಂಗ್ ಹಾಗೂ ಇತರ ಸೌಕರ್ಯ ಒದಗಿಸುವ ಕತಗಾಲ ಅರಣ್ಯ ವಲಯದ ಮಹಾ ಗಣಪತಿ ಗ್ರಾಮ ಅರಣ್ಯ ಸಮಿತಿ ಈ ಕುರಿತು ಸೂಚನಾ ಫಲಕವನ್ನು ಅಳವಡಿಸಿದೆ.