ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು, ಜಲಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ. ಮಳೆಯಿಮದ ಹಳ್ಳಗಳು, ಜಲಪಾತಗಳು, ಕೆರೆಗಳು, ಕೃಷಿ ಹೊಂಡಗಳು ಭರ್ತಿಯಾಗಿವೆ. ಸಾರ್ವಜನಿಕರು ನೀರಿನಲ್ಲಿ ಇಳಿಯುವುದು, ಬಟ್ಟೆ ತೊಳೆಯುವುದು, ಈಜುವುದು, ಮೋಜಿಗಾಗಿ ಸೆಲಿ ತೆಗೆಯುವುದು, ರೀಲ್ಸ್ ಮಾಡುವುದು ಮತ್ತು ಜಾನುವಾರುಗಳನ್ನು ನೀರಿನಲ್ಲಿ ಬಿಡುವುದು ಹಾಗೂ ನೀರಿನಲ್ಲಿ ಜಾನುವಾರುಗಳ ಮೈ ತೊಳೆಯುವುದನ್ನು ನಿರ್ಬಂಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.