ಕಾರವಾರ:ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮುಂಗಾರಿನ ಅವಧಿಯಲ್ಲಿ ಸಮುದ್ರಕ್ಕೆ ಇಳಿಯುವುದನ್ನು ನಿಷೇಽಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಹೊರಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರವಾಸಿಗರು ಅಬ್ಬರ ಅಲೆಗಳಿಗೆ ಸಿಲುಕಿ ಜೀವಕ್ಕೆ ಸಂಚಕಾರ ತಂದುಕೊಳ್ಳುವುದನ್ನು ತಡೆಯಲು ಜೂನ್, ಜುಲೈ, ಹಾಗೂ ಆಗಸ್ಟ್ ತಿಂಗಳಲ್ಲಿ ಕಡಲಿಗೆ ಇಳಿಯುವುದನ್ನು ನಿಷೇಽಸಲಾಗಿದೆ. ನಿಯಮ ಮೀರಿದರೆ ಕಾನೂನು ಕ್ರಮ ವಹಿಸಲಾಗುವುದು ಎಂದು ಎಲ್ಲ ಕಡಲ ತೀರಗಳಲ್ಲಿ ಬೋರ್ಡ್ ಅಳವಡಿಸಲಾಗಿದೆ. ಜಲಪಾತಗಳಿಗೆ ಈ ನಿಷೇಧ ಹೇರಿಲ್ಲ. ಈಗಾಗಲೇ ಅಲ್ಲೆಲ್ಲ ಬೋರ್ಡ್ಗಳಿವೆ ಎಂದರು.