ಜಿಲ್ಲೆ

ನವೋದಯ ವಿದ್ಯಾಲಯ ಪ್ರವೇಶಕ್ಕೆ ಫೆ.10 ರಂದು ಪರೀಕ್ಷೆ

ಮೈಸೂರು: ಜವಾಹರ ನವೋದಯ ವಿದ್ಯಾಲಯಕ್ಕೆ 2024-25ನೇ ಸಾಲಿನಲ್ಲಿ 9 ಮತ್ತು 11ನೇ ತರಗತಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಫೆ.10 ರಂದು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.

ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖೆಯ ವೆಬ್‌ಸೈಟ್ ಡಿಡಿಡಿ.್ಞಟ.ಜಟ.ಜ್ಞಿ ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ತಮ್ಮ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 10.30ಕ್ಕೆ ಹಾಜರಾಗಬೇಕು. ಪರೀಕ್ಷೆ ಬೆಳಗ್ಗೆ 11.15 ರಿಂದ ಮಧ್ಯಾಹ್ನ 1.45ರವರೆಗೆ ನಡೆಯಲಿದೆ.

9ನೇ ತರಗತಿ ಪರೀಕ್ಷೆಯು ಜೆಎಲ್‌ಬಿ ರಸ್ತೆಯ ಸರ್ಕಾರಿ ಮಹಾರಾಜ ಪಿಯು ಕಾಲೇಜು ಮತ್ತು ನಜರ್‌ಬಾದ್ ಪೀಪಲ್ಸ್ ಪಾರ್ಕ್‌ನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ, 11ನೇ ತರಗತಿ ಪರೀಕ್ಷೆಯು ಡಿಎಂಜಿ ಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆಯಲಿದೆ. ಮಾಹಿತಿಗೆ ದೂ: 0821-2970040 ಅಥವಾ ಮೊ:94484 13479 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.