ಜಿಲ್ಲೆ

ಜಾತಿ ಕಲಂನಲ್ಲಿ ಉಪ್ಪಾರ ಎಂದೇ ನಮೂದಿಸಿ : ಮೈಸೂರು ಜಿಲ್ಲಾ ಭಗೀರಥ ಉಪ್ಪಾರ ಸಂಘ ಸಲಹೆ

ಮೈಸೂರು:  ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.9ರವರಗೆ ನಡೆಸಲಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಉಪ್ಪಾರ ಸಮಾಜದವರು ಜಾತಿ ಕಲಂನಲ್ಲಿ ಉಪ್ಪಾರ ಎಂದೇ ನಮೂದಿಸಬೇಕು ಎಂದು ಮೈಸೂರು ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಎಸ್.ಯೋಗೀಶ ಉಪ್ಪಾರ ಮನವಿ ಮಾಡಿದರು.

ಸಮೀಕ್ಷೆ ನಡೆಸಲು ಮನೆಗಳಿಗೆ ಜಾತಿ, ಶೈಕ್ಷಣಿಕ, ಆರ್ಥಿಕ ಮತ್ತು ಪ್ರತಿ ಕುಟುಂಬದ 60 ಮಾಹಿತಿಯ ವೈಜ್ಞಾನಿಕ ಸಮೀಕ್ಷೆಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ರಾಜ್ಯದಲ್ಲಿ ಸುಮಾರು 20ರಿಂದ 25 ಲಕ್ಷ ಜನಸಂಖ್ಯೆ ಇರುವ ಪ್ರವರ್ಗ 1ರಡಿ ಬರುವ ಉಪ್ಪಾರ ಸಮಾಜದವರು ನಿಖರವಾದ ಮಾಹಿತಿ ನೀಡುವ ಮೂಲಕ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

9ನೇ ಕಾಲಂನಲ್ಲಿ ಜಾತಿಯ ಹೆಸರು ಬಂದಾಗ ಉಪ್ಪಾರ ಎಂದು ಮಾತ್ರ ನಮೂದಿಸಬೇಕು. ನಂತರ ಬರುವ 10ನೇ ಕಾಲಂನಲ್ಲಿ ಉಪಜಾತಿಗಳ ಹೆಸರಿನಲ್ಲಿ ತಮ್ಮನ್ನು ಕರೆಯಲ್ಪಡುವ ಯಾವುದಾದರೂ ಇದ್ದರೆ ಮಾತ್ರ ನಮೂದಿಸಿದರೆ, ಆಗ ಉಪ್ಪಾರ ಸಮಾಜದ ಜನಸಂಖ್ಯೆಯನ್ನು ನಿಖರವಾಗಿ ತಿಳಿಯಬಹುದು. ಸಮುದಾಯದ ಮುಖಂಡರು ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ರಾಮಶೆಟ್ಟಿ, ಸಿದ್ದಪ್ಪ, ಮಹದೇವ್ ಕಾಟ್ನಾಳು, ಸಂದೀಪ್, ಬಸವನಹಳ್ಳಿ ನಾರಾಯಣ, ಸಿದ್ದರಾಜು ಇತರರು ಇದ್ದರು.