ಬಾದಾಮಿಯಲ್ಲಿ ಒಳಮೀಸಲಾತಿ ಸಮೀಕ್ಷೆಯ ಬಗ್ಗೆ ಸಮಗಾರ ಸಮಾಜದವರಿಗೆ ಭಿತ್ತಿಚಿತ್ರ ವಿತರಣೆ ಮಾಡಿ ನಾಗರಾಜ ಹ. ಹೊಸಮನಿ ಮಾಹಿತಿ ನೀಡಿದರು. ಮಲಕಾಜಪ್ಪ ಚಂದಾವರಿ, ರವೀಂದ್ರ ಮುಂಡೇವಾಡಿ, ವಿಜಯ ದೊಡಮನಿ, ರಮೇಶ ದೊಡಮನಿ ಮತ್ತಿತರರಿದ್ದಾರೆ. 
ಜಿಲ್ಲೆ

ಸಮಗಾರರು ಕ್ರಮಸಂಖ್ಯೆ 93 ನಮೂದಿಸಿ

ವಿನಯ ಆಶೋಕ ನಾಯ್ಕ

ಬಾದಾಮಿ: ಸರ್ಕಾರ ಒಳಮೀಸಲಾತಿ ಜಾರಿಗೆ ತರಲು ಮೇ 5 ರಿಂದ 17 ರವರೆಗೆ ಪರಿಶಿಷ್ಟ ಜಾತಿಗಳ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ಪ್ರತಿ ಮನೆಗೆ ಗಣತಿದಾರರು ಬರಲಿದ್ದು, ಆ ಸಮಯದಲ್ಲಿ ಸಮಗಾರ ಸಮಾಜದ ಎಲ್ಲಾ ಬಾಂಧವರು ಕ್ರಮಸಂಖ್ಯೆ 93. ಜಾತಿ ಸಮಗಾರ ಎಂದು ಸ್ಪಷ್ಟವಾಗಿ ಬರೆಸಬೇಕೆಂದು ಸಮಾಜದ ಅಧ್ಯಕ್ಷ ನಾಗರಾಜ ಹ. ಹೊಸಮನಿ ತಿಳಿಸಿದರು.

ಪಟ್ಟಣದಲ್ಲಿ ಸಮಗಾರ ಸಮಾಜದವರ ಮನೆಗೆ ತೆರಳಿ ಭಿತ್ತಿ ಪತ್ರ ವಿತರಣೆ ಮಾಡಿ ಮಾಹಿತಿ ನೀಡಿದರು. ನಂತರ ಮಾತನಾಡಿದ ಅವರು, ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಮತ್ತು ಸಮಗಾರ ಸಮಾಜದ ನಿಖರವಾದ ಅಂಕಿ ಸಂಖ್ಯೆಗಳು ದಾಖಲಾಗಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮುಖಂಡ ಮಲಕಾಜಪ್ಪ ಚಂದಾವರಿ ಮಾತನಾಡಿದರು. ಸಮಾಜದ ಪ್ರಮುಖರಾದ ರವೀಂದ್ರ ಮುಂಡೇವಾಡಿ, ವಿಜಯ ದೊಡಮನಿ, ರಮೇಶ ದೊಡಮನಿ, ಶ್ರೀಕಾಂತ ಸಾನಕ್ಯಾನವರ, ಅಜಯ ದೊಡಮನಿ ಮತ್ತಿತರರಿದ್ದರು.