ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ವೇಮನ ರೆಡ್ಡಿ ಸಂದ ಅಧ್ಯಕ್ಷ ಜಗದೀಶ್​ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಉಪಾಧ್ಯಕ್ಷ ಶಿವಾರೆಡ್ಡಿ, ಮುಖಂಡರಾದ ಶ್ರೀನಿವಾಸ್​ ರೆಡ್ಡಿ, ಚಂಗಪ್ಪ ರೆಡ್ಡಿ ಇದ್ದರು. 
ಜಿಲ್ಲೆ

ಜಾತಿ ಸಮೀೆಯಲ್ಲಿ ರೆಡ್ಡಿ ಎಂದೇ ನಮೂದಿಸಿ

ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಸೆ.22ರಿಂದ ಜಾತಿ ಗಣತಿ ಹಮ್ಮಿಕೊಂಡಿದ್ದು, ಅದರಲ್ಲಿ ಎಲ್ಲ ರೆಡ್ಡಿ ಸಮುದಾಯ ಸಮರ್ಪಕವಾದ ಮಾಹಿತಿ ನೀಡುವ ಜತೆಗೆ ರೆಡ್ಡಿ ಎಂದೇ ನಮೂದಿಸುವಂತೆ ತಾಲೂಕು ವೇಮನ ರೆಡ್ಡಿ ಸಂದ ಅಧ್ಯಕ್ಷ ಜಗದೀಶ್​ ರೆಡ್ಡಿ ಹೇಳಿದರು.

\ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ವೇಮನ ಸಂದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳ ಆಯೋಗವು ಇದೀಗ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀೆಯನ್ನು ಪ್ರಾರಂಭಿಸಲು ಮುಂದಾಗಿದೆ, ಸಮೀೆ ವೇಳೆ ಸಮೀೆಗೆ ಬರುವವರ ಬಳಿ ಜಾತಿ ಕಾಲಂ ನಲ್ಲಿ ರೆಡ್ಡಿ ಎಂದು ನಮೂದಿಸಬೇಕು. ಸಮೀೆ ವೇಳೆ ಸರಿಯಾದ ಮಾಹಿತಿ ನೀಡದೇ ಇದ್ದಲ್ಲಿ ನಮ್ಮ ಸಮುದಾಯಕ್ಕೆ ಸರಕಾರದ ವತಿಯಿಂದ ಸಿಗಬೇಕಾದ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿ ಇತರ ವಿಭಾಗಗಳಲ್ಲಿ ಹಿನ್ನಡೆಯಾಗುತ್ತದೆ. ದೊಡ್ಡಬಳ್ಳಾಪುರದಲ್ಲಿ 7 ಸಾವಿರಕ್ಕಿಂತಲೂ ಅಧಿಕ ರೆಡ್ಡಿ ಜನಾಂಗದ ಜನಸಂಖ್ಯೆ ಇದ್ದರೂ ಈ ಹಿಂದಿನ ಸಮೀೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಸೇರಿ ಕೇವಲ ಸುಮಾರು 7 ಸಾವಿರ ಜನಸಂಖ್ಯೆ ಮಾತ್ರ ಇದ್ದಾರೆಂದು ಕೆಲವರು ತಪ್ಪು ಮಾಹಿತಿಯನ್ನು ನೀಡಲಾಗಿದೆ ಇದು ಸರಿಯಲ್ಲ ಇದನ್ನು ನಾವು ವಿರೋಧಿಸುತ್ತೇವೆ ಎಂದರು.

ವೇಮನ ರೆಡ್ಡಿ ಸಂದ ಮುಖಂಡ ಹನುಮಂತರೆಡ್ಡಿ ಮಾತನಾಡಿ, ರಾಜ್ಯದ ಸರ್ಕಾರ ಜಾತಿವಾರು ಗಣತಿ ನಡೆಯುತ್ತಿದೆ. ನಾವು ಯಾವುದೇ ಜಾತಿ ವಿರೋಧ ಮಾಡುವುದಿಲ್ಲ. ರಾಜ್ಯದಲ್ಲಿ ರೆಡ್ಡಿ ಸಮುದಾಯದ 50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಭವ್ಯ ಪರಂಪರೆಯಿದೆ. ಸಮುದಾಯದ ವತಿಯಿಂದ 2014ರಲ್ಲಿ ಬೆಂಗಳೂರು ಸಭೆ ಮಾಡಲಾಯಿತು. 4 ಲಕ್ಷ ಮಂದಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಜಾತಿಗಣತಿಯಲ್ಲಿ ಎಲ್ಲರೂ ಭಾಗವಹಿಸಿ ಸಮರ್ಪಕವಾದ ಮಾಹಿತಿ ನೀಡಿ ಎಂದರು.