ಶಿರಾ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಾಡುಗೊಲ್ಲ ಸಮುದಾಯದವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಕಾಡುಗೊಲ್ಲ ಎಂದು ನಮೂದಿಸುವಂತೆ ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ ಮನವಿ ಮಾಡಿದರು.
ಶಿರಾ ತಾಲೂಕಿನ ಗುಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಕಾಡುಗೊಲ್ಲ ಜಾತಿ ಜನಗಣತಿ ಬಗ್ಗೆ ಬುಧವಾರ ಆಯೋಜಿಸಿದ್ದ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು, ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಕಾಡುಗೊಲ್ಲ ಎಂಬುದಾಗಿ ಜಾತಿಯನ್ನು ಬರೆಯಿಸಿ ಎಂದು ತಿಳಿಸಿದರು.
ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಮಾತನಾಡಿದರು. ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಮುಖಂಡರಾದ ಕರಿಯಪ್ಪ, ಸೂಡ ಮಾಜಿ ಅಧ್ಯಕ್ಷ ಈರಣ್ಣ, ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ವಕೀಲ ಈರಣ್ಣ, ಯಲಿಯೂರು ಗ್ರಾಪಂ ಅಧ್ಯಕ್ಷ ಪುನೀತ್, ಸದಸ್ಯ ಶ್ರೀನಿವಾಸ್, ಪಟೇಲ್ ಕೃಷ್ಣೇಗೌಡ, ಶಿವಣ್ಣ, ಈರಣ್ಣ ರಂಗಸ್ವಾಮಿ, ಮಹಾಲಿಂಗಪ್ಪ ಸೇರಿದಂತೆ ಹಲವಾರು ಕಾಡುಗೊಲ್ಲ ಇದ್ದರು.