ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತಾಲೂಕಿನ ಯಂಟಗಾನಹಳ್ಳಿ ಗ್ರಾಪಂನ 2ನೇ ಅವಧಿಗೆ ಅಧ್ಯಕ್ಷರಾಗಿ ಎಚ್.ಎ.ರಾಹುಲ್‌ಗೌಡ, ಉಪಾಧ್ಯಕ್ಷರಾಗಿ ಹೊನ್ನಲಕ್ಷ್ಮಮ್ಮ ಆಯ್ಕೆಯಾದರು.
25 ಸದಸ್ಯ ಬಲದ ಪಂಚಾಯಿತಿಯಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಹಂಚೀಪುರದ ಎಚ್.ಎ.ರಾಹುಲ್‌ಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಎಂದು ೋಷಿಸಲಾಯಿತು. ಪರಿಶಿಷ್ಟಜಾತಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೊನ್ನಲಕ್ಷ್ಮಮ್ಮ 14 ಮತ ಪಡೆದು ವಿಜೇತರಾದರು. ಶೋಭಾ ಜಯರಾಮಯ್ಯ 11 ಮತ ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಹರೀಶ್ ತಿಳಿಸಿದರು.
ಗ್ರಾಪಂ ನೂತನ ಅಧ್ಯಕ್ಷ ಎಚ್.ಎ.ರಾಹುಲ್‌ಗೌಡ ಮಾತನಾಡಿ, ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಗ್ರಾಪಂನಲ್ಲಿ ಪ್ರಮುಖವಾಗಿ ಮೂಲ ಸೌಕರ್ಯಗಳೊಂದಿಗೆ ಇ-ಖಾತಾ ಅಂದೋಲ, ಸ್ಥಳೀಯ ಕೈಗಾರಿಕೆಯಲ್ಲಿ ಸ್ಥಳೀಯ ಉದ್ಯೋಗಾವಕಾಶ ಕೊಡಿಸಲಾಗುವುದು ಎಂದರು.
ಗ್ರಾಪಂನಲ್ಲಿ ಪ್ರತಿಯೊಬ್ಬರನ್ನು ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡಾಗ ಮಾತ್ರ ಅಭಿವೃದ್ಧಿಕಾರ್ಯ ನಡೆಯಲು ಸಾಧ್ಯ. ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ವಾಸ್ತವ್ಯವನ್ನು ಅರಿತುಕೊಂಡು ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಜೆಡಿಎಸ್ ಮುಖಂಡ ಭವಾನಿಶಂಕರ್ ಬೈರೇಗೌಡ ಹೇಳಿದರು. ಮುಖಂಡರಾದ ಜಿ.ಸಂಪತ್, ಅನ್ನದಾನಯ್ಯ, ಎಚ್.ಬಿ.ಮಂಜುನಾಥ್, ವಿಜಯ್‌ಕುಮಾರ್, ಮೈಲಾರಪ್ಪ, ವಕೀಲ ಕೆ.ಎನ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.