ಜಿಲ್ಲೆ

ಸಹಾಯಧನಕ್ಕೆ ದಾಖಲಾತಿ ತೊಡಕು, ಹೂ ಬೆಳೆಗಾರರಿಗೆ ಅನುದಾನ ಬಿಡುಗಡೆ, ನಿಗದಿತ ಗುರಿ ಸಾಧಿಸುವಲ್ಲಿ ವಿಳಂಬ

Bengaluru Rural

ಬೆಂಗಳೂರು: ಹೂವು ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿ ರಾಜ್ಯ ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಂಡಿರುವ ಬೆಳೆ ಸಮೀಕ್ಷೆಯಡಿ ಸಹಾಯಧನ ವಿತರಣೆಗೆ ಸೂಕ್ತ ದಾಖಲಾತಿ ಸಲ್ಲಿಕೆಯೇ ತೊಡಕಾಗಿದೆ!

ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಸಮೀಕ್ಷೆ ಕೈಗೊಂಡು ರಾಜ್ಯ ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಯಷ್ಟು ಅರ್ಜಿ ಸಲ್ಲಿಕೆಯಾಗಿಲ್ಲ. ಜತೆಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಸೂಕ್ತ ದಾಖಲೆ ಕೊರತೆ ಇರುವುದರಿಂದ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ವಿಳಂಬವಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗರಿಷ್ಠ 1 ಹೆಕ್ಟೇರ್‌ಗೆ 25 ಸಾವಿರ ರೂಪಾಯಿಯಂತೆ ಪರಿಹಾರಧನ ೋಷಿಸಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ 1821 ಹೆಕ್ಟೇರ್ ಹಾಗೂ 4.73 ಕೋಟಿ ರೂ. (473.15ಲಕ್ಷ ರೂ) ಗುರಿ ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಲಾಗಿದೆ.

ಗಾಗಲೇ ಬೆಳೆ ಸಮೀಕ್ಷೆಯಲ್ಲಿರುವ ಎ್ಐಡಿ ಸಂಖ್ಯೆ ಹೊಂದಿರುವ ಮತ್ತು ಎ್ಐಡಿ ಸಂಖ್ಯೆ ಹೊಂದಿಲ್ಲದ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಎ್ಐಡಿ ಸಂಖ್ಯೆ ಹೊಂದಿಲ್ಲದ ರೈತರು ಮೇ 26 ರೊಳಗೆ ಸೂಕ್ತ ದಾಖಲಾತಿ ಸಲ್ಲಿಸಿ ಎ್ಐಡಿ ಸಂಖ್ಯೆ ಸೃಷ್ಟಿಸಲು ಈ ಹಿಂದೆಯೇ ಇಲಾಖೆ ಕೋರಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದಾಖಲಾತಿ ಸಲ್ಲಿಸದ ಕಾರಣ ನಿಗದಿತ ಗುರಿ ಸಾಧಿಸಲು ವಿಳಂಬವಾಗಿದೆ.

ಮತ್ತೊಂದು ಗಡುವು: ಬೆಳೆ ಸಮೀಕ್ಷೆಯಲ್ಲಿರುವ ಎ್ಐಡಿ ಸಂಖ್ಯೆ ಹೊಂದಿಲ್ಲದ ಲಾನುಭವಿಗಳು ಆರ್‌ಟಿಸಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ, ರೇಷನ್ ಕಾರ್ಡ್ ಪ್ರತಿ ಹಾಗೂ ಪಾಸ್‌ಪೋರ್ಟ್ ಅಳತೆಯ ೆಟೋದೊಂದಿಗೆ ತಾಲೂಕು ತೋಟಗಾರಿಕೆ ಇಲಾಖೆಗೆ ಜೂ.26 ರೊಳಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಮರಗೋಡು ತಿಳಿಸಿದ್ದಾರೆ.

ಮುಂಗಾರು ಬೆಳೆ ಸಮೀಕ್ಷೆ: 2019-20ನೇ ಸಾಲಿನ ಅಲ್ಪಾವಧಿಯ ಚೆಂಡು ಹೂವು, ಸೇವಂತಿಗೆ ಮತ್ತಿತರ ಹೂವು ಬೆಳೆಗಳ ಹಿಂಗಾರು ಸಮೀಕ್ಷೆ ಮತ್ತು ಬಹುವಾರ್ಷಿಕ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್ ಮತ್ತಿತರ ಬೆಳೆ ಹಾಗೂ ಸಂರಕ್ಷಿತ ಬೇಸಾಯದಲ್ಲಿ ಬೆಳೆದ ಕಟ್ ಫ್ಲವರ್ಸ್‌ ಹೂವು ಬೆಳೆಗಳ ಮುಂಗಾರು ಬೆಳೆ ಸಮೀಕ್ಷೆ ಮಾಹಿತಿ ಆಧಾರದ ಮೇಲೆ ಪರಿಹಾರ ಧನ ಸಿಗಲಿದೆ.

ಜೂ.26ರ ಸಂಜೆ 5ಗಂಟೆಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಈ ದಿನಾಂಕದ ಬಳಿಕ ಅರ್ಜಿ ಸಲ್ಲಿಸಿದರೆ ಸಹಾಯಧನಕ್ಕೆ ಪರಿಗಣಿಸಲಾಗುವುದಿಲ್ಲ. ಮಾಹಿತಿ ಅವಶ್ಯವಿದ್ದರೆ ತಾಲೂಕು ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು. ಮಹಾಂತೇಶ್ ಮರಗೋಡು, ತೋಟಗಾರಿಕೆ ಉಪನಿರ್ದೇಶಕ ಬೆಂ.ಗ್ರಾಮಾಂತರ