ಜಿಲ್ಲೆ

ಈರುಳ್ಳಿ ಬೆಳೆ ವಿಮಾ ಯೋಜನೆಯಲ್ಲಿ ನೋಂದಾಯಿಸಿ

ಗಿರೀಶ ಸಗರ

ವಿಜಯಪುರ : ಜಿಲ್ಲೆಯಲ್ಲಿ 2024&25ನೇ ಸಾಲಿನಲ್ಲಿ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆಯ ಈರುಳ್ಳಿ ಬೆಳೆ ವಿಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ವಿಜಯಪುರ ತೋಟಗಾರಿಕೆ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.

ಹಿಂಗಾರು ಹಂಗಾಮಿನ ಈರುಳ್ಳಿ ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನ. 30 ಹಾಗೂ ಬೇಸಿಗೆ ಹಂಗಾಮಿನ ಈರುಳ್ಳಿ ಬೆಳೆಯ ನೋಂದಾಯಿಸಿಕೊಳ್ಳಲು 2025 ಜನವರಿ 1 ರಿಂದ 2025 ಫೆಬ್ರವರಿ 28 ರವರೆಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಬಹುದಾಗಿದೆ. ಬೆಳೆ ವಿಮೆ ನೋಂದಣಿಗಾಗಿ, ಆಧಾರ್​ ಕಾರ್ಡ್​ ಝೆರಾಕ್ಸ್​, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್​ ಪಾಸ್​ ಪ್ರತಿಯೊಂದಿಗೆ ಗ್ರಾಮ ಒನ್​, ಸಿಎಸ್​ಸಿ ಸೆಂಟರ್​ ಹಾಗೂ ಹತ್ತಿರದ ಬ್ಯಾಂಕ್​ಗಳಲ್ಲಿ ನೋಂದಾಯಿಸಿಕೊಳ್ಳಬಹುದು.

2024&25ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಚಡಚಣ, ಮುದ್ದೇಬಿಹಾಳ, ಬಬಲೇಶ್ವರ, ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಸಿಂದಗಿ ತಾಲೂಕು ಹಾಗೂ ಅವುಗಳ ಹೋಬಳಿಗಳ ವ್ಯಾಪ್ತಿಯಲ್ಲಿ ಪ್ರತಿ ಎಕರೆಗೆ 1,610 ರೂ., ಹಾಗೂ 2024&25 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಬಸವನ ಬಾಗೇವಾಡಿ, ಕೋಲಾರ ತಾಲೂಕಿನ ಹಾಗೂ ಅವುಗಳ ಹೋಬಳಿಯ ಈರುಳ್ಳಿ ಬೆಳೆಯ ಬೆಳೆ ವಿಮೆಗಾಗಿ ಪ್ರತಿ ಎಕರೆಗೆ 1,610 ರೂ., ಕಂತು ಪಾವತಿಸಿ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ ಬ್ಯಾಂಕ್​ ಶಾಖೆ ಅಲ್ಲದೆ, ಮೊ. 7795927064 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.