ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿ ಸಾಂತ್ವನಂ ಬಡ್ಸ್ ವಿಶೇಷ ಚೇತನರ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಜರುಗಿತು. ಜಿಲ್ಲಾ ಕುಟುಂಬಶ್ರೀ ಮಿಷನ್ ಸಹಕಾರದಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಪಂಚಾಯಿತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಭಿ ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ಎಡಿಎಂಸಿ ಕಿಶೋರ್ ಕುಮಾರ್, ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪಂಚಾಯಿತಿ ಸದಸ್ಯ ಮಹೇಶ್ ಭಟ್, ಕೆಎಸ್‌ಬಿ ಇಂಜಿನಿಯರ್ ರಾಜಗೋಪಾಲ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಸ್ನೇಹ ಕೌನ್ಸಿಲರ್ ಶೋಭಾ, ಸಮುದಾಯಿಕ ಕೌನ್ಸಿಲರ್ ಪ್ರಸೀತಾ, ರಾಜರಾಮ ಪೆರ್ಲ, ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸತ್ಯನಾರಾಯಣ ಪೆರ್ಲ, ಕಿಶನ್‌ಕುಮಾರ್ ಮತ್ತಿತರರಿದ್ದರು. ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿದರು. ಸ್ಪೆಷಲ್ ಎಜುಕೇಟರ್ ಚೈತ್ರಾ ವಂದಿಸಿದರು.