ಜಿಲ್ಲೆ

ಜೀವನದ ಏರಿಳಿತ ಆನಂದಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಷ್ಟದ ಸಮಯಗಳಿಗೆ ಕಾಯುವ ಬದಲು, ನಾವು ಸಂತೋಷ ಕಂಡುಕೊಳ್ಳಲು ಮತ್ತು ಸವಾಲುಗಳ ನಡುವೆಯೂ ಜೀವನವನ್ನು ಸ್ವೀಕರಿಸಲು ಕಲಿಯಬೇಕು. ನಾವು ಹೊಂದಿಕೊಳ್ಳಬೇಕು, ಸ್ಥಿತಿಸ್ಥಾಪಕರಾಗಿ ಉಳಿಯಬೇಕು. ಜೀವನದ ಏರಿಳಿತಗಳನ್ನು ಆನಂದಿಸಲು ಕಲಿಯಬೇಕು ಮತ್ತು ವೃತ್ತಿ ಜತೆಗೆ ಪ್ರವೃತ್ತಿಯಿಂದ ಸಮಾಜಮುಖಿ ಬದುಕು ಕಲಿಯಬೇಕು ಎಂದು ನ್ಯಾಯವಾದಿ ಅರುಣ ಜೋಶಿ ಅಭಿಪ್ರಾಯಪಟ್ಟರು.
ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ನಿವೃತ್ತರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೀತಿಯು ಜೀವನದಲ್ಲಿ ಅತ್ಯಂತ ಸಂತೋಷದಾಯಕ ಮತ್ತು ಪೂರೈಸುವ ಅನುಭವಗಳಲ್ಲಿ ಒಂದು. ಇದು ಅಪಾರ ಸಂತೋಷ ಮತ್ತು ತೃಪ್ತಿ ತರುತ್ತದೆ. ಹೀಗಾಗಿ ಪ್ರೀತಿ ಮತ್ತು ಸಕಾರಾತ್ಮಕತೆ ಹರಡುತ್ತಲೇ ಇರಬೇಕು ಎಂದರು.
ಅಭಿನಂದನೆ ಸ್ವೀಕರಿಸಿದ ಸಾಯಿಕುಮಾರ ಹಿಳ್ಳಿ ಮಾತನಾಡಿ, ಸೇವೆಯಲ್ಲಿರುವ ತನಕ ಜಿಲ್ಲೆಯ ಅಂಕಿ&ಸಂಖ್ಯೆಗಳನ್ನು ನಿಖರವಾಗಿ ನೀಡಿ ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿ ಮಾಡಿದ ಹೆಮ್ಮೆ ಇದೆ. ಪ್ರತಿಷ್ಠಾನದ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತವೆ. ನಮ್ಮ ಮುಂದಿನ ಜೀವನದ ಬದುಕಿಗೆ ನೆಮ್ಮದಿ ನೀಡಲು ಪ್ರೇರಣೆಯದಾಯಕ ಎಂದರು.
ಅಧ್ಯತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯ ಡಾ. ಲಿಂಗರಾಜ ಅಂಗಡಿ ಮಾತನಾಡಿ, ವೃತ್ತಿಯ ಕಾರ್ಯಗಳು ಬದುಕಿನ ನಿರ್ಮಾಣಕ್ಕೆ ಪೂರಕವಾದರೆ, ಪ್ರವೃತ್ತಿಗಳು ಸಮಾಜಮುಖಿ ಬದುಕನ್ನು ಎತ್ತಿ ತೋರಿಸಲು ಸಹಾಯಕವಾಗುತ್ತದೆ ಎಂದರು.
ಇಎಸ್​ಐ ಆಸ್ಪತ್ರೆ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಗಾಯತ್ರಿ ಕಮತಗಿ ಮಾತನಾಡಿದರು. ನಿವೃತ್ತ ಶಿಕರಾದ ಬಿ.ಬಿ. ಬಾಕಿರ್, ಶಂಕರ ಗಂಗಣ್ಣವರ, ಬಸವರಾಜ ಮೊರಬದ, ಎಸ್​.ಎಂ. ದಾನಪ್ಪಗೌಡರ, ಮಹಾಲಕ್ಷಿ$್ಮ ಕುಲಕಣಿರ್, ಶಂಕರ ಕಲಟಗಿ, ಪದ್ಮಾ ಉಗರಗೋಳ, ಅರುಣ ಹುಬ್ಬಳ್ಳಿ. ಡಾ. ಬಿ.ಆರ್​. ರಾಠೋಡ, ಆರತಿ ಪಾಟೀಲ, ಶಾರದಾ ಕಂಠಿ, ನಾಗರಾಜ ಇಟಗಿ, ಎಸ್​.ವಿ. ಚನ್ನವಿರಗೌಡರ, ಮಹಾಲಿಂಗ ಕಮತಗಿ, ಸಿ.ಎನ್​ ರಡ್ಡೇರ, ಸುಧಾ ಕಬ್ಬೂರ, ಕುರ್ತಕೋಟಿ, ಇತರರು ಇದ್ದರು.
ಮಹಾಂತೇಶ ನರೇಗಲ್​ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಂದಾ ಯಡಾಲ ವಂದಿಸಿದರು.