ತುಮಕೂರು: ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಸ ಸ್ಥಾಪನೆ, ಕುಂಭಾಭಿಷೇಕ, ಚಂಡಿಕಾಹೋಮ, ಮಹಾಪೂಜೆ ಶುಕ್ರವಾರ ನೆರವೇರಿದವು.
ಸಮಾರಂಭ ಉದ್ಘಾಟಿಸಿದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನಂಬಿಕೆ ಮನುಷ್ಯನಲ್ಲಿ ಆತ್ಮವಿಶ್ವಾಸ ವೃದ್ಧಿಸಿ ಅಸಾಧ್ಯವಾದುದನ್ನೂ ಸಾಧಿಸಬಹುದಾದ ಶಕ್ತಿ ನೀಡುತ್ತದೆ. ಧರ್ಮಶ್ರದ್ಧೆಯು ವೈಜ್ಞಾನಿಕತೆಯ ವೈರುಧ್ಯವೇನಲ್ಲ, ಆತ್ಮಶಕ್ತಿ ಹೆಚ್ಚಿಸಿಕೊಳ್ಳಲು ಧಾರ್ಮಿಕ ಶ್ರದ್ಧೆಯಿಂದ ಸಾಧ್ಯವಾಗಬಹುದು ಎಂದು ಅಭಿಪ್ರಾಯಪಟ್ಟರು.
ಒಳ್ಳೆಯ ಹೃದಯವಂತಿಕೆಯಿಂದ ದೇವರನ್ನು ಪ್ರಾರ್ಥಿಸಿದರೆ ಬದುಕು ಸಾರ್ಥಕ, ಪ್ರತಿ ಮನುಷ್ಯನಲ್ಲೂ ದೇವರು ಇದ್ದಾನೆ ಎಂಬ ಜೀವಾನುಭವ ಹೊಂದಬೇಕಷ್ಟೆ ಎಂದರು. ಟಿ.ಎಸ್.ಅನಂತಮೂರ್ತಿ ರಚಿಸಿದ ರಮಣ ಮಹರ್ಷಿ ಗ್ರಂಥ ಬಿಡುಗಡೆ ಮಾಡಿದ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ನಮ್ಮ ದೇಶ, ಸಂಸ್ಕೃತಿ ಮೇಲೆ ಅದೆಷ್ಟೇ ದಾಳಿಗಳಾದರೂ ನಮ್ಮ ಧರ್ಮ ನಮ್ಮಲ್ಲಿನ ಅವಧೂತರು, ಸ್ವಾಮೀಜಿಗಳ ಮಾರ್ಗದರ್ಶನದಿಂದ ಸದೃಢವಾಗಿ ಉಳಿದಿದೆ ಎಂದು ಬಣ್ಣಿಸಿದರು.
ಧಾರ್ಮಿಕ ಚಿಂತಕಿ ವೀಣಾ ಬನ್ನಂಜೆ ರಮಣ ಮಹರ್ಷಿ ಮಾತನಾಡಿದರು. ಶ್ರೀದೇವಿ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ನಿವೃತ್ತ ಐಎಎಸ್ ಅಧಿಕಾರಿ ಡಿ.ಸತ್ಯಮೂರ್ತಿ, ರಾಷ್ಟ್ರೀಯ ಖ್ಯಾತಿಯ ಶಿಲ್ಪಿ ಶ್ರೀಸಾರಾಲು ವೆಂಕಟರಮಣಭಟ್ಟ, ಟ್ರಸ್ಟ್
ಮ್ಯಾನೇಜಿಮಗ್ ಟ್ರಸ್ಟಿ ಶಾಂತಾದುರ್ಗಾದೇವಿ ಮತ್ತಿತರರು ಇದ್ದರು.