ಅರಹತೊಳಲಿನಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳ ೩೧ನೇ ಶ್ರದ್ಧಾಂಜಲಿ ಸಭೆಗೆ ಭಕ್ತಿ ಸಮರ್ಪಣೆ ಕಾರ್ಯಕ್ರಮವನ್ನು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಎಚ್.ಆರ್.ಬಸವರಾಜಪ್ಪ, ರವಿಕುಮಾರ್, ಶ್ರೀಧರ್ ಪಾಟೀಲ್, ಯಶೋದಮ್ಮ, ಎಚ್.ಬಸಪ್ಪ, ರಾಜೇಶ್ ಪಾಟೀಲ್, ಬಿ.ಚಂದ್ರಪ್ಪ ಇತರರಿದ್ದರು. 
ಜಿಲ್ಲೆ

ಗರಿಮೆ ಹೆಚ್ಚಿಸಿದ ಚಂದ್ರಯಾನ: ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Shivamogga - Desk - Megha MS

ಹೊಳೆಹೊನ್ನೂರು: ಮುಂದೊದು ದಿನ ಚಂದ್ರಲೋಕದಲ್ಲಿ ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆ ನಡೆದರೂ ಅಚ್ಚರಿಪಡಬೇಕಾಗಿಲ್ಲ ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅರಹತೊಳಲಿನಲ್ಲಿ ಭಾನುವಾರ ಭದ್ರಾವತಿ ತಾಲೂಕಿನ ಭಕ್ತರಿಂದ ಹಮ್ಮಿಕೊಂಡಿದ್ದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳ 31ನೇ ಶ್ರದ್ಧಾಂಜಲಿ ಸಭೆಗೆ ಭಕ್ತಿ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ತಾಯಂದಿರು ಮಕ್ಕಳಿಗೆ ಚಂದ್ರನನ್ನು ತೋರಿಸಿ ಊಟ ಮಾಡಿಸುತ್ತಿದ್ದರು. ಈಗ ಅದೇ ಮಕ್ಕಳು ಚಂದ್ರಯಾನ ಮಾಡುವಷ್ಟು ತಯಾರಾಗಿದ್ದಾರೆ. ಅಮೆರಿಕದ ಭಕ್ತರು ತರಳಬಾಳು ಹುಣ್ಣಿಮೆಯನ್ನು ವಿದೇಶದಲ್ಲೇ ನಡೆಸಿಕೊಡುವುದಾಗಿ ಹೇಳುತ್ತಿದ್ದಾರೆ. ಮಠದ ವಿದ್ಯಾರ್ಥಿಗಳು ಪ್ರಪಂಚದ ಹಲವು ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಚಂದ್ರಯಾನದ ಮೂಲಕ ವಿಶ್ವದಲ್ಲಿ ಭಾರತದ ಗರಿಮೆ ಇನ್ನಷ್ಟು ಹೆಚ್ಚಾಗಿದೆ. ಚಂದ್ರಯಾನದ ವಿಜ್ಞಾನಿಗಳ ತಂಡದಲ್ಲಿ ಸಿರಿಗೆರೆ ಸಂಸ್ಥೆಯ ಮೂರು ವಿದ್ಯಾರ್ಥಿಗಳು ಕೆಲಸ ಮಾಡಿರುವುದು ಹೆಮ್ಮೆಯ ವಿಷಯ. ಸೆ.೨೪ರಂದು ಸಿರಿಗೆರೆಯಲ್ಲಿ ನಡೆಯುವ ಹಿರಿಯ ಶ್ರೀಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಚಂದ್ರಯಾನ ತಂಡದಲ್ಲಿ ಕೆಲಸ ಮಾಡಿದ ವಿಜ್ಞಾನಿಗಳನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.
ಚಂದ್ರಯಾನವನ್ನು ಗೌಪ್ಯವಾಗಿಟ್ಟು ಉಡಾವಣೆಗೆ ಮುಂದಾದ ರಷ್ಯಾ ಮುಗ್ಗರಿಸಿದೆ. ಭಾರತದಲ್ಲಿ ವೈಜ್ಞಾನಿಕತೆ, ಆಧುನಿಕತೆ ಬೆಳೆಯುತ್ತಿದೆ ಎಂಬುದಕ್ಕೆ ಚಂದ್ರಯಾನ ಕೈಗನ್ನಡಿಯಾಗಿದೆ. ಇದರ ಮೂಲಕ ಭಾರತೀಯರು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಚಂದ್ರನ ಮೇಲೆ ರೋವರ್ ಇಳಿಸಿದ ದೃಶ್ಯ ಎಲ್ಲರಲ್ಲೂ ಮೈ ರೊಮಾಂಚನಗೊಳಿಸಿತು ಎಂದರು.
ದೂರದರ್ಶನ ಕಲಾವಿದ ಬಸವರಾಜ್ ಉಪಾನ್ಯಾಸ ನೀಡಿ, ಜಗತ್ತಲ್ಲಿ ಪ್ರೀತಿಯೊಂದೇ ಎಲ್ಲದಕ್ಕೂ ಮದ್ದು. ಸಮರಸ ಜೀವನ ನಡೆಸಲು ಪರಸ್ಪರ ಅನ್ಯೋನ್ಯತೆ, ಸಹಬಾಳ್ವೆ ಪೂರಕ. ಪ್ರಸ್ತುತ ಸಮಾಜಕ್ಕೆ ಧರ್ಮ, ಸಾರ್ಥಕತೆಯ ಬಗ್ಗೆ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ. ಜೀವನದಲ್ಲಿ ಮೌಲ್ಯಗಳನ್ನು ಅರಿತು ಬದುಕು ಕಟ್ಟಿಕೊಳ್ಳಬೇಕು ಎಂದರು.
ಸಾಧು ಸಮಾಜದ ಅಧ್ಯಕ್ಷ ರವಿಕುಮಾರ್, ತರಳಬಾಳು ಯುವ ವೇದಿಕೆ ಅಧ್ಯಕ್ಷ ಶ್ರೀಧರ್ ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎಲ್.ಷಡಕ್ಷರಿ, ಡಾ. ಧನಂಜಯ್ ಸರ್ಜಿ, ಎಚ್.ಬಸಪ್ಪ, ಕೆ.ಎಚ್.ತೀರ್ಥಪ್ಪ, ಜಗದೀಶ್, ಯಶೋದಮ್ಮ, ರಾಜೇಶ್ ಪಾಟೀಲ್, ಮಂಜುನಾಥ್, ಬಿ.ಚಂದ್ರಪ್ಪ, ಜಯದೇವಪ್ಪ, ಎಚ್.ಎನ್.ನಾಗರಾಜ್, ಶಂಕರಮೂರ್ತಿ, ಎಂ.ಎಸ್ ಚಂದ್ರಶೇಖರ್, ಗುಡುಮಗಟ್ಟೆ ಕುಬೇಂದ್ರಪ್ಪ, ರವಿಗೌಡ, ಎಸ್.ಪಿ.ದಿನೇಶ್, ಆಶಾ ಶ್ರೀಧರ್, ರುದ್ರೇಶಪ್ಪ ಇತರರಿದ್ದರು.

ರೈತರ ಪರ ಸರ್ಕಾರ ಸೆಳೆಯಲು ಕ್ರಮ
ಶ್ರದ್ಧಾಂಜಲಿ, ಶಭೆ, ಭಕ್ತಿ, ಸಮರ್ಪಣೆ, ಚಂದ್ರಯಾನ, ವಿಜ್ಞಾನಿ, ಸನ್ಮಾನ, ಸ್ವಾಮೀಜಿ, ಸಿರಿಗೆರೆ ಮಠ, ಲಿಂಗೈಕ್ಯ
ಜ್ಯದ ರೈತರ ಪರ ಸಿರಿಗೆರೆ ಮಠ ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು. ಸಕಾಲದಲ್ಲಿ ಮಳೆಯಾಗದೆ ನೀರಿಲ್ಲದೆ ನಮ್ಮ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಬರ ಘೋಷಿಸದೆ ಮೀನಮೇಷ ಎಣಿಸುತ್ತಿದೆ. ಹಲವೆಡೆ ಬಿತ್ತನೆ ಮಾಡಿಲ್ಲ. ಕೆಲವೆಡೆ ಬಿತ್ತನೆ ನಡೆಸಿದರೂ ಫಸಲು ಸಂಪೂರ್ಣವಾಗಿ ಒಣಗಿನಿಂತಿದೆ. ಸಿರಿಗೆರೆ ಮಠದ ರೈತಪರ ಕಾಳಜಿಯ ಏತ ನೀರಾವರಿಗಳಿಂದ ಕೆಲವೆಡೆ ರೈತರು ಬೆಳೆ ಉಳಿಸಿಕೊಂಡಿದ್ದಾರೆ. ರೈತರ ಸಮಸ್ಯೆ ಕುರಿತು ಶ್ರದ್ಧಾಂಜಲಿ ಸಭೆಯಲ್ಲಿ ರೈತರ ಸಮಾವೇಶ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಶೈಕ್ಷಣಿಕವಾಗಿ ಸಮಾಜಗಳು ಮುನ್ನಲೆಗೆ ಬರಬೇಕು. ಮನುಷ್ಯನಲ್ಲಿ ಕೃತಜ್ಞತಾ ಭಾವ ಕಡಿಮೆಯಾಗುತ್ತಿದೆ. ಸಮಾಜ ಸೇವೆ ಮಾಡ ಬಯಸುವವರು ಬೈಯಿಸಿಕೊಳ್ಳಲು ಸಿದ್ಧರಿರಬೇಕಾದ ಸಂದಿಗ್ಧತೆ ಇದೆ. ಸಂಸಾರದಲ್ಲಿ ಪತಿ, ಪತ್ನಿ ನಡುವೆ ಕಲಹವಿದ್ದಂತೆ ಮಠಾಽÃಶರು ಹಾಗೂ ಭಕ್ತರ ಮಧ್ಯೆಯೂ ಜಟಾಪಟಿ ಇರುತ್ತದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರೆ ನಿಂದನೆ ಮಾತು ಎದುರಿಸಬೇಕಾಗುತ್ತದೆ.|ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿತರಳಬಾಳು ಮಠ, ಸಿರಿಗೆರೆ