ಜಿಲ್ಲೆ

ಜ್ಞಾನದ ನವೀಕರಣದಿಂದ ಬೋಧನೆ ವೃದ್ಧಿಸಿಕೊಳ್ಳಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಶರೀರ ರಚನಾಶಾಸ್ತ್ರ ವಿಭಾಗ ವತಿಯಿಂದ "ಕೈ ಶರೀರ ರಚನಾಶಾಸ್ತ್ರ' ವಿಷಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಶನಿವಾರ ಏರ್ಪಡಿಸಲಾಗಿತ್ತು.
ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ ಮಾತನಾಡಿ, ಕಾರ್ಯಾಗಾರವು ನಮ್ಮ ವೃತ್ತಿಯಲ್ಲಿ ಉಪಯುಕ್ತವಾಗಿರುವುದರಿಂದ ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸುಧಾರಿತ ಸೌಲಭ್ಯ ಮತ್ತು ಜ್ಞಾನದ ನವೀಕರಣ ಬಳಸಿಕೊಂಡು ನಮ್ಮ ಬೋಧನೆ ವೃದ್ಧಿಸಿಕೊಳ್ಳಬೇಕು ಎಂದರು.
ಕಾರ್ಯಾಗಾರವನ್ನು ವಿಶೇಷವಾಗಿ ಮಾನವರ ಕೈ, ಕೈ ಬಗ್ಗೆ ತಮ್ಮ ಜ್ಞಾನ ನವೀಕರಿಸಲು ಬಯಸುವ ವೈದ್ಯಕಿಯ ವೃತ್ತಿಪರರು ಮತ್ತು ಆರೋಗ್ಯ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಸುಮಾರು 60ಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಕುಲಸಚಿ ಡಾ. ಚಿದೇಂದ್ರ ಶೆಟ್ಟರ್​, ಶರೀರರಚನಾಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎ.ವಿ. ಕುಲಕರ್ಣಿ, ಡಾ.ಎಸ್​.ಕೆ. ದೇಶಪಾಂಡೆ, ಇತರರು ಇದ್ದರು. ಎಸ್​ಡಿಎಂ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ನಿರಂಜನಕುಮಾರ್​ ಅವರು ಮಾದರಿ ತಯಾರಿಕೆ ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು.
ಡಾ. ವೀಣಾ ಕುಲಕರ್ಣಿ ಸ್ವಾಗತಿಸಿದರು. ಡಾ. ರೋಶನಿ ಸದಾಶಿವ ನಿರೂಪಿಸಿದರು. ಡಾ. ವಿನಯ ಕುಲಕರ್ಣಿ ವಂದಿಸಿದರು.