ಜಿಲ್ಲೆ

ತಪ್ಪು ಮಾತಾಡಲು ಇರೋದೇ ಇಂಗ್ಲಿಷ್ ಭಾಷೆ

ಮರಿದೇವ ಹೂಗಾರ

ಹುಬ್ಬಳ್ಳಿ: ಇಂಗ್ಲಿಷ್ ಭಾಷೆ ಇರುವುದೇ ತಪ್ಪು ಮಾತನಾಡಲು. ಸರಿಯಾಗಿ ಮಾತನಾಡಲು ಇರುವುದು ಕನ್ನಡ ಭಾಷೆ ಮಾತ್ರ. ಹಾಗಾಗಿ ಇಂಗ್ಲಿಷ್ ಭಾಷೆ ತಪ್ಪಾಗಿ ಮಾತನಾಡಿದ್ದೇನೆಂದು ತಲೆಕೆಡಿಸಿಕೊಳ್ಳಬೇಡಿ. ಇದು ಮಹಾನ್ ತಪ್ಪು ಕೂಡ ಅಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ ಅಭಿಪ್ರಾಯಪಟ್ಟರು.

ಕಿಮ್್ಸ ಕನ್ನಡ ಸಂಘದಿಂದ ಇಲ್ಲಿನ ಕಿಮ್್ಸ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ನುಡಿ ಹಬ್ಬ ‘ನುಡಿ ಮೃದಂಗ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ತುಸು ಧೈರ್ಯ ಜಾಸ್ತಿ. ಎಲ್ಲವನ್ನೂ ಮೆಟ್ಟಿ ನಿಲ್ಲುವ ತಾಕತ್ತು ಇರುತ್ತದೆ. ನಾ ಫೇಲ್ ಆದೆ ಎಂದು ಧೃತಿಗೆಡಬೇಡಿ. ಸೋತವರೇ ದೊಡ್ಡ ಇತಿಹಾಸ ನಿರ್ವಿುಸಿದ್ದಾರೆ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ಪ್ರೋತ್ಸಾಹ ತುಂಬುವುದಿಲ್ಲ. ತುಂಬುತ್ತಾರೆಂದು ಕಾಯುವ ಅಗತ್ಯವಿಲ್ಲ. ನಿನ್ನನ್ನು ನೀನೇ ನಿರ್ವಿುಸಿಕೊಳ್ಳಬೇಕು. ಗೆದ್ದು ಮುಂದೆ ಬಂದಾಗ ಎಲ್ಲರೂ ಬೆನ್ನು ತಟ್ಟುತ್ತಾರೆ. ಸೋತೆನೆಂದು ಭಾವಿಸಿ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಕನಸು ಕಂಡು ನನಸು ಮಾಡಿಕೊಳ್ಳುವತ್ತ ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿವಳಿಕೆ ನೀಡಿದರು.

ಪ್ರದೀಪ ಈಶ್ವರ ಅವರು ಭಾಷಣದ ಕೊನೆಯ ಸಂದರ್ಭದಲ್ಲಿ ದಿ. ಪುನೀತ್​ರಾಜಕುಮಾರ ನಟಿಸಿದ ‘ಬೊಂಬೆ ಹಾಡುತೈತಿ’ ಹಾಡು ಹಾಡಿದಾಗ, ನೆರೆದವರೂ ದನಿಗೂಡಿಸಿ ಮೊಬೈಲ್ ಫೋನ್ ಟಾರ್ಚ್ ಹಿಡಿದು ಬೆಳಗುವ ಮೂಲಕ ಪುನೀತ್​ರನ್ನು ಸ್ಮರಿಸಿದರು.

ಕರ್ನಾಟಕ ಜಾನಪದ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಆನಂದಪ್ಪ ಜೋಗಿ ಉಪನ್ಯಾಸ ನೀಡಿದರು.

ಕಿಮ್್ಸ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ರಾಜಶೇಖರ ದ್ಯಾಬೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಆರ್​ಎಂಒ ಡಾ. ಸಿದ್ದೇಶ್ವರ ಕಟಕೋಳ, ಸಾಮಾನ್ಯ ಚಟುವಟಿಕೆಗಳ ಕಾರ್ಯಾಧ್ಯಕ್ಷ ಡಾ.ಎಸ್.ಎಫ್. ಕಮ್ಮಾರ, ಡಾ.ಕೆ.ಎಫ್. ಕಮ್ಮಾರ, ಕಾರ್ಯದರ್ಶಿಗಳಾದ ಚಿ. ವಿನಾಯಕ, ಸುಹನಾ ಕೆ.ಎಸ್. ಇತರರು ಇದ್ದರು.

ಬಾಕ್ಸ...

ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

ಇಲ್ಲಿನ ಕಿಮ್್ಸ ಆವರಣದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಶಾಸಕ ಪ್ರದೀಪ ಈಶ್ವರ ಅವರು ಕನ್ನಡ ನುಡಿ ಹಬ್ಬದ ರಥಕ್ಕೆ ಚಾಲನೆ ನೀಡಿದರು. ಡೊಳ್ಳು, ಕರಡಿ ಮಜಲು, ನೃತ್ಯ ಮೆರವಣಿಗೆಯುದ್ದಕ್ಕೂ ಮೆರಗು ನೀಡಿದವು. ವೈದ್ಯಕೀಯ ವಿದ್ಯಾರ್ಥಿಗಳು ವಾದ್ಯಗಳ ಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಖುಷಿಪಟ್ಟರು.