ಚೆನ್ನೈನ ನಿಶಾ ರಂಗ ಸಂಸ್ಥೆ ವತಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ದಿನಗಳ ಇಂಗ್ಲಿಷ್ ನಾಟಕೋತ್ಸವ ಆಯೋಜಿಸಿದ್ದು, ಜು.15ರಂದು ‘ಮಾರ್ಗಝಿ’ ಹಾಗೂ ಜು.16ರಂದು ‘ಸಾರ್ಡಿಡ್’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ದೇಶದ ವಿವಿಧೆಡೆ ಅತ್ಯುತ್ತಮ ಪ್ರದರ್ಶನ ಕಂಡಿರುವ ಇಂಗ್ಲಿಷ್‌ನ ಎರಡು ನಾಟಕಗಳನ್ನು ಇದೇ ಮೊದಲ ಬಾರಿಗೆ ಮೈಸೂರಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಮೈಸೂರಿನ ಇಂಗ್ಲಿಷ್ ಸಾಹಿತ್ಯಾಸಕ್ತರಿಗೆ ವಿಭಿನ್ನ ಕಥೆ ಹೊಂದಿರುವ ನಾಟಕ ಸವಿರುಚಿ ಉಣಬಡಿಸಲು ಮುಂದಾಗಿದೆ.
ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜು. 15ರಂದು ಸಂಜೆ 6.30ಕ್ಕೆ ‘ಮಾರ್ಗಝಿ’ ನಾಟಕ ಪ್ರದರ್ಶನ ನಡೆಯಲಿದೆ. ನಟನ ರಂಗಶಾಲೆಯಲ್ಲಿ ಜು.16ರಂದು ಸಂಜೆ 6.30ಕ್ಕೆ ದಿ ಹಿಂದು ಪ್ಲೇರೈಟ್ ಅವಾರ್ಡ್-2019 ವಿಜೇತ ‘ಸಾರ್ಡಿಡ್’ ನಾಟಕ ಪ್ರದರ್ಶನ ಇರುತ್ತದೆ.