ಬೆಳಗಾವಿ: ದೇಶದ ಪ್ರಗತಿಗೆ ಕಾರಣವಾಗಿರುವ ತಂತ್ರಾನದ ಬೆಳವಣಿಗೆಯಲ್ಲಿ ಇಂಜಿನಿಯರ್ಗಳ ಪಾತ್ರ ಅಪಾರವಾಗಿದೆ ಎಂದು ನಾಗನೂರು ರುದ್ರಾ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬದುಕಿನಲ್ಲಿ ಹಣವಿದ್ದರೆ ಮಾತ್ರ ಸಾಲದು. ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ನಮ್ಮನ್ನು ಆದರದಿಂದ ಗೌರವಿಸುತ್ತದೆ. ಇಂಜಿನಿಯರಿಂಗ್ ಪದವಿ ಜನಸೇವೆಗಾಗಿ ಮೀಸಲಿಡಬೇಕೇ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ. ಓರ್ವ ಯಶಸ್ವಿ ಇಂಜಿನಿಯರ್ ಆಗುವುದಕ್ಕಿಂತ ಸಮಾಜಸೇವೆ ಮಾಡುವ ಒಳ್ಳೆಯ ನಾಗರಿಕರಾಗಬೇಕು ಎಂದು ಕಿವಿಮಾತು ಹೇಳಿದರು.
ಗೋಕುಲ್ ಫೆರೋಕಾಸ್ಟ್ ಪೆವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಲಾಂಡ್ಗೆ ಮಾತನಾಡಿ, ವೃತ್ತಿಪರ ಜೀವನದಲ್ಲಿ ಧೈರ್ಯ, ನವೋತ್ಪಾದನೆ ಮತ್ತು ನೈತಿಕತೆಯಿಂದ ಕಾರ್ಯನಿರ್ವಹಿಸಿದರೆ ಯಾರು ಬೇಕಾದರೂ ಯಶಸ್ವಿ ಇಂಜಿನಿಯರ್ ಆಗಲು ಸಾಧ್ಯ ಎಂದರು.
ಎಸ್ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ ಡಾ.ಎಫ್.ವಿ. ಮಾನ್ವಿ ಅಧ್ಯತೆ ವಹಿಸಿದ್ದರು. ಉದ್ಯಮಿ ವಿಲಾಸ ಬಾದಾಮಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್.ಪಟಗುಂದಿ ಸ್ವಾಗತಿಸಿದರು. ಅಕಾಡೆಮಿಕ್ ಡೀನ್ ಡಾ. ಅಶೋಕ ಹುಲಗಬಾಳಿ ವರದಿ ಓದಿದರು. ಡಾ.ಯಾಸ್ಮೀನ್ ಶೇಖ ವಂದಿಸಿದರು.