ಗೋಕಾಕ: ನಗರದಲ್ಲಿ ಸಮಗ್ರ ಕಟ್ಟಡ ಸಾಮಗ್ರಿಗಳ ಬೃಹತ್ ಪ್ರದರ್ಶನ ಆಯೋಜಿಸಿರುವ ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಯುಎಸ್ ಕಮ್ಯೂನಿಕೇಷನ್ ಕಾರ್ಯ ಶ್ಲಾನೀಯ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದಲ್ಲಿ ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಯುಎಸ್ ಕಮ್ಯೂನಿಕೇಷನ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಟ್ಟಡ ಸಾಮಗ್ರಿ, ಒಳ&ಹೊರ ವಿನ್ಯಾಸ ಮತ್ತು ಪಿಠೋಪಕರಣ, ಗೃಹಸಾಲ ಹಾಗೂ ಬಿಲ್ಡ್ಟೆಕ್&2025 ಸಮಗ್ರ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಮಾತನಾಡಿ, ಗೋಕಾಕ ಡೀರ್ಲಸ್ ಮತ್ತು ವಿತರಕರು ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಮನೆ ಕಟ್ಟುವವರಿಗೆ ಪ್ರಯೋಜನಕಾರಿಯಾಗಿದೆ ಎಂದರು.
ನಗರಸಭೆ ಆಯುಕ್ತ ರವಿ ರಂಗಸುಭೆ, ವಿನೋದ ಪಾಟೀಲ, ಮಂಜುನಾಥ ಗಜಾಕೋಶ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಾರ್ಯಧ್ಯಕ್ಷ ಚಿದಾನಂದ ದೇಮಶೆಟ್ಟಿ, ಯುಎಸ್ ಕಮ್ಯೂನಿಕೇಷನ್ನ ಉಮಾಪತಿ, ಶಿವಕುಮಾರ, ಕಿರಣ ಇತರರಿದ್ದರು.