ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಬುದ್ಧಿಮತ್ತೆ ಹಾಗೂ ಸವಾಜಕ್ಕೆ ನೀಡಿದ ಕೊಡುಗೆ ಇಂದಿನ ಯುವ ಇಂಜಿನಿಯರ್‌ಗಳಿಗೆ ವಾದರಿ. ಯುವ ಇಂಜಿನಿಯರ್‌ಗಳಿಂದ ನವ ಅವಿಷ್ಕಾರಗಳು ನಮ್ಮ ದೇಶದಲ್ಲಿ ಮೂಡುವಂತಾಗಬೇಕು ಎಂದು ನಿಟ್ಟೆ ಡೀಮ್ಡ್ ವಿವಿಯ ಐ.ಐ.ಸಿ. ನಿರ್ದೇಶಕ ಡಾ.ಎ.ಎನ್.ಪರಮೇಶ್ವರನ್ ಹೇಳಿದರು.
ಮೂಲ್ಕಿಯಲ್ಲಿ ಶನಿವಾರ ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ನಡೆದ ಇಂಜಿನಿಯರ್ ದಿನಾಚರಣೆ ಉದ್ಘಾಟಿಸಿ ವಾತನಾಡಿದರು.
ಎ.ಸಿ.ಸಿ.ಇ.(ಐ.) ಸೆಕ್ರೆಟರಿ ಜನರಲ್ ಇಂಜಿನಿಯರ್ ರಾಜೇಂದ್ರ ಕಲ್ಬಾವಿ ವಾತನಾಡಿ, ಸಂಟಿತರಾಗಿ ಜ್ಞಾನ ಹಂಚಿಕೊಳ್ಳುವ ಜತೆಗೆ ಪ್ರಾವಾಣಿಕತೆ ಹಾಗೂ ಅಭಿವೃದ್ಧಿಯನ್ನು ಕಂಡುಕೊಳ್ಳುವ ಮೂಲಕ ಅಭಿವೃದ್ಧಿ ದೇಶಗಳಂತೆ ನಮ್ಮಲ್ಲಿಯೂ ಹೊಸತನ ಮೂಡಬೇಕು ಎಂದರು.
ನಿಟ್ಟೆ ಎನ್.ಎಂ.ಎ.ಎಂ.ಐ.ಟಿ. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಅರುಣ್ ಕುವಾರ್ ಭಟ್ ಅವರನ್ನು ಪತ್ನಿ ರವಿಕಲಾ ಭಟ್ ಸಮೇತವಾಗಿ ಸನ್ಮಾನಿಸಲಾಯಿತು. ಮೂಲ್ಕಿ ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್‌ನ ಸ್ಥಾಪಕ ಅಧ್ಯಕ್ಷ ಇಂಜಿನಿಯರ್ ಜೀವನ್ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿಯ ಉಪಾಧ್ಯಕ್ಷ ಸಾದಿಕ್ ಆಲಿ, ಗೌರವ ಪ್ರಧಾನ ಕಾಯದರ್ಶಿ ಸುಜಿತ್ ಎಸ್.ಸಾಲ್ಯಾನ್, ಕೋಶಾಧಿಕಾರಿ ವರುಣ್, ಜತೆ ಕಾರ್ಯದರ್ಶಿ ತಾರಾನಾಥ್ ಎಚ್.ಬಿ., ಕಾರ್ಯಕಾರಿ ಸಮಿತಿಯ ಕೆ.ಹರಿಶ್ಚಂದ್ರ, ಚರಣ್ ಕುವಾರ್, ಅನೂಪ್‌ಕುವಾರ್ ಶೆಟ್ಟಿ, ನವೀನ್ ಪಿರೇರಾ, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ವಾಜಿ ಪ್ರಧಾನ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ, ಸ್ಟ್ರಕ್ಚರಲ್ ಇಂಜಿನಿಯರ್ ಅನಿಲ್ ಹೆಗ್ಡೆ ಮತ್ತು ಗೋಪಾಲ್ ಭಟ್, ಜಗದೀಶ್ ಪ್ರಭು, ಪ್ರಮೋದ್ ಕುವಾರ್, ಉಮೇಶ್ ಭಟ್, ಯೋಗೀಶ್‌ಚಂದ್ರ ಧಾರ್, ಇಕ್ಬಾಲ್ ಪಿ.ಎಂ., ಕಿರಣ್ ಉಪ್ಪೂರ್, ವಿಜಯರಾಜ್ ಶೆಟ್ಟಿ, ಸತೀಶ್ ರಾವ್ ಇಡ್ಯಾ ಮತ್ತಿತರರು ಉಪಸ್ಥಿತರಿದ್ದರು. ಸುಜಿತ್ ಎಸ್.ಸಾಲ್ಯಾನ್ ಸ್ವಾಗತಿಸಿದರು. ಶರ್ಮಿಳಾ ಅಮೀನ್ ನಿರ್ವಹಿಸಿದರು.
ಚಿತ್ರನಟ ಸಾತ್ವಿಕ್ ಶೆಟ್ಟಿ, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೀತಮ್ ಕುವಾರ್, ಸುರತ್ಕಲ್ ಆಸರೆ ಎನಿಮಲ್ ಟ್ರಸ್ಟ್‌ನ ಸಾಕ್ಷಿ ಸುನೀಲ್ ಕಾಮತ್, ಸಂಭ್ರಮ ಈವೆಂಟ್ ಪ್ಲಾನರ್ಸ್‌ನ ದೀಪಾ ರಾವ್, ವಿಡಿಯೋಗ್ರಾಫರ್ ನಿಹಾಲ್ ವಿ.ಶೆಟ್ಟಿ, ಎಸಿಇಎಂ ಮಹಿಳಾ ಸದಸ್ಯೆ ವಿಂಧ್ಯಾ ನಾಯಕ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.