ಜಿಲ್ಲೆ

ಮಾನಸಿಕ ಖಿನ್ನತೆಗೊಳಗಾಗಿದ್ದ ಇಂಜಿನಿಯರಿಂಗ್‌ ಪದವೀಧರೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಾಬುರಾವ ಯಡ್ರಾಮಿ


ಕಲಬುರಗಿ : ಮಾನಸಿಕ ಖಿನ್ನತೆಗೊಳಗಾಗಿದ್ದ ಇಂಜಿನಿಯರಿAಗ್ ಪೂರ್ಣಗೊಳಿಸಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ರಾಮತೀರ್ಥ ನಗರದಲ್ಲಿ ನಡೆದಿದೆ.
ಪುಷ್ಪಾ ಶಿವರಜ ಜವಳಿ (೨೫) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್.
ಇAಜಿನಿಯರಿAಗ್ ಓದಿದ್ದ ಯುವತಿ ಕಳೆದ ನಾಲ್ಕೆÊದು ವರ್ಷಗಳಿಂದ ಖಿನ್ನತೆಗೊಳಗಾಗಿದ್ದರು. ವೈದ್ಯರ ಬಳಿಯಲ್ಲಿ ತೋರಿಸಲಾಗುತ್ತಿತ್ತು. ೨೬ ರಂದು ಮನೆಯಲ್ಲಿ  ನೇಣು ಬಿಗಿದುಕೊಂಡು ಫ್ಯಾನಿಗೆ  ನೇತು ಬಿದ್ದು  ಒದ್ದಾಡುತ್ತಿದ್ದ ಆಕೆಯನ್ನು ನೋಡಿದ ಮನೆಯವರು ಹಾಗೂ ಸಂಬAಧಿಕರು ಸೇರಿಕೊಂಡು ಬಾಗಿಲು ಮುರಿದು ವೇಲ್ ಕತ್ತರಿಸಿದ್ದರು. ಕೂಡಲೇ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಕೊನೆಯುಸಿರೆಳೆದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು  ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.