ಮಡಿಕೇರಿ: ರಸ್ತೆ ಕಾಮಗಾರಿ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ವೇಳೆ ಕೊಡಗು ಜಿ.ಪಂ. ಇಂಜಿನಿಯರ್ ಶ್ರೀಕಂಠಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.
ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಜಿ.ಪಂ. ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಗುತ್ತಿಗೆದಾರ ನಂದಾ ಎಂಬವರ ಬಳಿ ಒಟ್ಟು ೨.೬೭ ಲಕ್ಷ ಲಂಚ ಬೇಡಿಕೆ ಹಿಟ್ಟಿದ್ದರು. ಈ ಹಿಂದೆ ೭೫ ಸಾವಿರ ಸ್ವೀಕರಿಸಿದ್ದ ಶ್ರೀಕಂಟಯ್ಯ ಶನಿವಾರ ೧.೯೨ ಲಕ್ಷ ಹಣ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆಯೂ ಅಕ್ರಮ ಹಣ ವರ್ಗಾವಣೆಯಲ್ಲಿ ಸಸ್ಪೆಂಡ್ ಆಗಿದ್ದ ಇಇ ಶ್ರೀಕಂಠಯ್ಯ ಈ ಬಾರಿ ಲಂಚ ಸ್ವೀಕಾರ ಸಂದರ್ಭ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶ್ರೀಕಂಠಯ್ಯ ಜತೆಗೆ ಎಂಜಿಯರ್ ತೌಸೀಫ್, ರಮೇಶ್, ಸಂತೋಷ್, ಸಿಬ್ಬಂದಿ ಕವನ್ ಬಂಧಿಸಲಾಗಿದೆ ಎಂದು ಎಸಿಬಿ ಎಸ್ಪಿ ಅರುಣಾಂಶು ಗಿರಿ ಮಾಹಿತಿ ನೀಡಿದರು.
ಕೊಡಗು, ಮೈಸೂರು ವಿಭಾಗದ ಎಸಿಬಿ ಡಿವೈಎಸ್‌ಪಿ ತಿಪ್ಪಣ್ಣ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿ ಹಾಗೂ ದಾಖಲೆ ವಶಕ್ಕೆ ಪಡೆದಿದ್ದಾರೆ.